ಸಿಗರೇಟ್ ಸಂಪೂರ್ಣ ನಿಷೇಧಕ್ಕೆ ಮಾಸ್ಟರ್ ಪ್ಲಾನ್ ಮಾಡಿದ ನ್ಯೂಜಿಲ್ಯಾಂಡ್ ಸರಕಾರ

ಬೆಂಗಳೂರು, ಡಿಸೆಂಬರ್ 10, 2021 (www.justkannada.in): 14 ವರ್ಷದೊಳಗಿನವರಿಗೆ ಸಿಗರೇಟ್‌ನ್ನು ಸಂಪೂರ್ಣವಾಗಿ ನಿಷೇಧಿಸುವ ಯೋಜನೆಯನ್ನು ನ್ಯೂಜಿಲ್ಯಾಂಡ್ ಸರಕಾರ ಹಾಕಿಕೊಂಡಿದೆ.

ಸಿಗರೇಟ್‌, ತಂಬಾಕನ್ನು ಯುವಕರಿಂದ ಸಂಪೂರ್ಣವಾಗಿ ದೂರವಿರಿಸುವ ನಿಟ್ಟಿನಲ್ಲಿ ನ್ಯೂಜಿಲೆಂಡ್‌ ಸರ್ಕಾರ ಹೊಸ ಕಾನೂನು ತರಲು ಸಿದ್ಧವಾಗಿದೆ.

ಸದ್ಯ ನ್ಯೂಜಿಲೆಂಡ್‌ನ‌ಲ್ಲಿ 18 ವರ್ಷದೊಳಗಿನವರಿಗೆ ಸಿಗರೇಟ್‌ ಬಳಕೆಗೆ ಅವಕಾಶವಿದೆ. ಅದನ್ನು ಮುಂದಿನ ವರ್ಷ 14 ವರ್ಷಕ್ಕೆ ಇಳಿಸಲಾಗುತ್ತದೆ ಎನ್ನಲಾಗಿದೆ.

ಅದೇ ರೀತಿ ಪ್ರತಿ ವರ್ಷ ಕನಿಷ್ಠ ವಯಸ್ಸಿನ ಮಿತಿಯನ್ನು ಏರಿಕೆ ಮಾಡಿ, ಈಗ ಅಪ್ರಾಪ್ತ ವಯಸ್ಸಿನಲ್ಲಿರುವವರನ್ನು ಸಂಪೂರ್ಣವಾಗಿ ಸಿಗರೇಟ್‌ ಬಳಕೆಯಿಂದ ದೂರ ಮಾಡುವ ಯೋಜನೆ ಹೊಂದಲಾಗಿದೆ.