ನಿಗದಿಯಂತೆ ಮೇ 21ರಂದೇ ನಡೆಯಲಿದೆ ನೀಟ್ ಪ್ರವೇಶ ಪರೀಕ್ಷೆ: ಕೇಂದ್ರ ವಾರ್ತಾ ಇಲಾಖೆ ಸ್ಪಷ್ಟನೆ

Promotion

ಸ್ನಾತಕೋತ್ತರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್‌) ಪರೀಕ್ಷೆ ಮುಂದೂಡಿಕೆ ಆಗಲಿಲ್ಲ ಎಂದು ಕೇಂದ್ರ ವಾರ್ತಾ ಇಲಾಖೆ ಸ್ಪಷ್ಟಪಡಿಸಿದೆ.

ಇದೇ 21ರಂದು ನಡೆಯಲಿರುವ ಸ್ನಾತಕೋತ್ತರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನಿಗದಿಯಂತೆ ನಡೆಯಲಿದೆ. ರೀಕ್ಷೆಯು ಮುಂದೂಡಿಕೆ ಆಗಿದೆ ಎಂಬ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಕೇಂದ್ರ ವಾರ್ತಾ ಇಲಾಖೆ ತಿಳಿಸಿದೆ.

ಅಂದಹಾಗೆ ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ನೀಟ್‌ ಪರೀಕ್ಷೆಯನ್ನು ಮೇ 21ರ ಬದಲಾಗಿ ಜುಲೈ 9ರಂದು ನಡೆಸಲಾಗುವುದು ಎಂದು ಇದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿ ಹೆಸರಿನಲ್ಲಿ ಈ ಸುದ್ದಿ ಹರಿದಾಡುತ್ತಿದೆ

ಸುಳ್ಳು ಸುದ್ದಿಗೆ ಅಭ್ಯರ್ಥಿಗಳು ಕಿವಿಗೊಡಬಾರದು ಎಂದು ಇಲಾಖೆ ಹೇಳಿದೆ. ಪರೀಕ್ಷೆ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ https://natboard.edu.in ಕ್ಲಿಕ್ಕಿಸಬಹುದು ಎಂದು ಇಲಾಖೆ ತಿಳಿಸಿದೆ.