ಬೆಂಗಳೂರಿನಲ್ಲಿ ಆರಂಭವಾಗಿದೆ ರೋಬೋಟ್ ರೆಸ್ಟೋರೆಂಟ್: ಆಹಾರ ಸರ್ವ್ ಮಾಡುತ್ತೆ 6 ರೋಬೋಟ್ ಗಳು

ಬೆಂಗಳೂರು:ಆ-19:(www.justkannada.in) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೋಬೋಟ್ ಗಳು ಕಾರ್ಯನಿರ್ವಹಿಸಲು ಆರಂಭಿಸಿದ್ದು, ಇತ್ತೀಚೆಗೆ ಪಾನಿಪುರಿ ವೆಂಡಿಂಗ್ ಮಷಿನ್ ಕಾರ್ಯನಿರ್ವಹಣೆ ಬೆನ್ನಲ್ಲೇ ಈಗ ರೋಬೋಟ್ ರೆಸ್ಟೋರೆಂಟ್ ಒಂದು ಆರಂಭವಾಗಿದೆ.

ಹೌದು. ಬೆಂಗಳೂರಿನ ಇಂದಿರಾನಗರದ ಹೈ ಸ್ಟ್ರೀಟ್ 100 ಫೀಟ್ ರಸ್ತೆಯಲ್ಲಿ ಈ ರೋಬೋಟಿಕ್ ರೆಸ್ಟೋರೆಂಟ್ ಪ್ರಾರಂಭವಾಗಿದ್ದು, ಈ ಹೋಟೆಲ್ ನಲ್ಲಿ ರೋಬೋಟ್‌ಗಳು ಮಾನವರಂತೆ ಆಹಾರವನ್ನು ಸರ್ವ್ ಮಾಡುತ್ತವೆ.

ಪ್ರಾಯೋಗಿಕ ಹಂತವಾಗಿ ಚೆನ್ನೈ ಮತ್ತು ಕೊಯಮತ್ತೂರಿನಲ್ಲಿ ಈ ರೆಸ್ಟೋರೆಂಟ್ ಗಳನ್ನು ಪ್ರಾರಂಭಿಸಲಾಗಿತ್ತು. ಇಲ್ಲಿ ಯಶಸ್ಸು ಕಂಡ ಹಿನ್ನಲೆಯಲ್ಲಿ ಇದೀಗ ಬೆಂಗಳೂರಿನಲ್ಲಿಯೂ ಚಾಲನೆ ನೀಡಲಾಗಿದೆ. ಈ ರೆಸ್ಟೋರೆಂಟ್‌ನಲ್ಲಿ ಒಮ್ಮೆಗೆ 50 ಡೈನರ್‌ಗಳಿಗೆ ಅವಕಾಶವಿದ್ದು, ಮೆನು ಹೆಚ್ಚಾಗಿ ಇಂಡೋ-ಏಷ್ಯನ್ ಅಡುಗೆ ಪದ್ಧತಿಯನ್ನು ಒಳಗೊಂಡಿರುತ್ತದೆ.

ರೆಸ್ಟೋರೆಂಟ್‌ನಲ್ಲಿ 6 ರೋಬೋಟ್‌ಗಳ ತಂಡವಿದೆ, ಪ್ರತಿ ಟೇಬಲ್‌ಗೆ ಟ್ಯಾಬ್ಲೆಟ್ ಅಳವಡಿಸಲಾಗಿದೆ ಇದರಿಂದ ಡೈನರ್‌ಗಳು ತಮ್ಮ ಆದೇಶವನ್ನು ನೀಡಬಹುದು. ಇದಾದ ನಂತರ ರೋಬೋಟ್‌ ಆಹಾರ ಸೇವೆಯನ್ನು ಒದಗಿಸುತ್ತವೆ. ಈ ರೋಬೋಟ್‌ಗಳು ವಿಶೇಷ ಸಂದರ್ಭಗಳಲ್ಲಿ ಅಂದರೆ ಹುಟ್ಟುಹಬ್ಬದಂತಹ ಸಂದರ್ಭಗಳಲ್ಲಿ ಗ್ರಾಹಕರಿಗೆ ಶುಭಾಶಯಗಳನ್ನು ಕೂಡ ಕೊರುತ್ತವೆ.

Image result for robot restaurant springs up in Indiranagar

ರೋಬೋಟ್ ರೆಸ್ಟೋರೆಂಟ್ ನ ಸಂಸ್ಥಾಪಕರಾಗಿರುವ ವೆಂಕಟೇಶ್ ರಾಜೇಂದ್ರನ್ ಹೇಳುವ ಪ್ರಕಾರ ಬೆಂಗಳೂರಿನಲ್ಲಿ ಈಗಾಗಲೇ ಹಲವಾರು ವೈವಿಧ್ಯಮಯ ಪಾಕಶಾಲೆಯ ಅನುಭವಗಳಿಗೆ ತೆರದ ಸ್ಥಳವಾಗಿದೆ. ಈ ನಿಟ್ಟಿನಲ್ಲಿ ನಾವು ಕೂಡ ರೋಬೋಟ್ ಗಳನ್ನು ಹೋಟೆಲ್ ನಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಯೋಚಿಸಿದೆವು. ಆ ಕನಸು ಈಗ ನನಸಾಗಿದೆ. ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಮ್ಮ ಟೀಮ್ ಗೆ ಇದೊಂದು ಹೆಮ್ಮೆಯ ದಿನವೆನಿಸುತ್ತದೆ ಎಂದು ತಿಳಿಸಿದ್ದಾರೆ.

ರೋಬೋಟ್ ಗಳನ್ನು ನೊಡಿಕೊಳ್ಳಲು ರೆಸ್ಟೋರೆಂಟ್‌ನಲ್ಲಿರುವ ಸಿಬ್ಬಂದಿಗೆ ಸಹ ತರಬೇತಿ ನೀಡಲಾಗಿದೆ.”ಕಾರ್ಯಾಚರಣೆಯ ಅವಧಿಯಲ್ಲಿ ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳಿಗೆ ಹಾಜರಾಗಲು ಸಿಬ್ಬಂದಿ ಗಳಿಗೆ ಸಹ ತರಬೇತಿ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ಆರಂಭವಾಗಿದೆ ರೋಬೋಟ್ ರೆಸ್ಟೋರೆಂಟ್: ಆಹಾರ ಸರ್ವ್ ಮಾಡುತ್ತೆ 6 ರೋಬೋಟ್ ಗಳು

The machines are taking over Namma Bengaluru

After paanipuri vending machine, a robot restaurant springs up in Indiranagar