ಜಾಕಿಸ್ ಅಸೋಸಿಯೇಶನ್ ಆಫ್ ಇಂಡಿಯಾ ವಾರ್ಷಿಕ ಸಭೆ: ನೂತನ ಆಪ್ ಹಾಗೂ ವೆಬ್ ಸೈಟ್ ಲಾಂಚ್

kannada t-shirts

ಬೆಂಗಳೂರು:ಜೂ-15:(www.justkannada.in) ಜಾಕಿಸ್ ಅಸೋಸಿಯೇಶನ್ ಆಫ್ ಇಂಡಿಯಾ ವಾರ್ಷಿಕ ಸಾಮಾನ್ಯ ಸಭೆ 2018- 2019, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 11ರಂದು ಡೆಯಿತು.

ಈ ವೇಳೆ ಜೆಐಐ ಅಧ್ಯಕ್ಷ ಪಿ.ಎಸ್.ಚೌಹನ್ ಮತ್ತು ಜೆಎಐ ಕನ್ಸಲ್ಟೆಂಟ್ ಕ್ರಿಸ್ ಹೂವರ್ ಹೊಸ ಅಪ್ಲಿಕೇಶನ್ ( in Android and IOS) ಮತ್ತು ಮೈಸೂರು ಸಾಫ್ಟ್ವೇರ್ ಕಂಪನಿ www.codeproofs.com (ಕೋಡ್ ಪ್ರೂಫ್ಸ್ ಪ್ರೈವೇಟ್ ಲಿಮಿಟೆಡ್) ಹಾಗೂ ಎನ್.ಐ.ಇ (NIE) ಮೈಸೂರು ಎಂಜಿನಿಯರಿಂಗ್ ಕಾಲೇಜು ಪದವೀಧರರು ಅಬಿವೃದ್ಧಿಪಡಿಸಿರುವ ಅಭಿವೃದ್ಧಿಪಡಿಸಿದ ಹೊಸ ವೆಬ್ಸೈಟ್ ಅನ್ನು ಉದ್ಘಾಟನೆ ಮಾಡಲಾಯಿತು.

ಜಾಕಿಸ್ ಅಸೋಸಿಯೇಶನ್ ಆಫ್ ಇಂಡಿಯಾ 1971 ರಲ್ಲಿ ಸ್ಥಾಪನೆಯಾಗಿದ್ದು, ಇದು ಮೈಸೂರು ಸೊಸೈಟೀಸ್ ರಿಜಿಸ್ಟ್ರೇಶನ್ ಆಕ್ಟ್ 1960 ರ ಅಡಿಯಲ್ಲಿ ನೋಂದಣಿಯಾಗಿತ್ತು ಮತ್ತು ಪ್ರಸ್ತುತ ಭಾರತ ಮತ್ತು ಹೊರದೇಶಗಳಲ್ಲಿ 378 ಸದಸ್ಯರನ್ನು ಹೊಂದಿದೆ.

ಈ ಸಂಘವನ್ನು ರಚಿಸುವ ಮುಖ್ಯ ಉದ್ದೇಶವೆಂದರೆ ಜಾಕಿಗಳನ್ನು ಉತ್ತಮಗೊಳಿಸುವುದು. ದಶಕಗಳಿಂದ ತಮ್ಮದೇ ಆದ ಟರ್ಫ್ ಕ್ಲಬ್‌ಗಳನ್ನು ಹೊಂದಿರುವ ಭಾರತೀಯ ಜಾಕಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿ, ಸಮಸ್ಯೆಗಳನ್ನು ಪರಿಹರಿಸುವುದಾಗಿದೆ.

ಜಾಕಿಸ್ ಅಸೋಸಿಯೇಷನ್ ​​ಆಫ್ ಇಂಡಿಯಾದ ಮೊದಲ ಸಾಮಾನ್ಯ ಸಭೆಯು 1972 ರ ಜುಲೈ 20 ರಂದು ಸಂಸ್ಥಾಪಕ ಅಧ್ಯಕ್ಷ ಎ.ಎ. ಚಿದಂಬರಂ ಅಧ್ಯಕ್ಷತೆಯಲ್ಲಿ ನಡೆದಿತ್ತು. ಆರಂಭದಲ್ಲಿ ಸಂಘದಲ್ಲಿ 104 ಸದಸ್ಯರು ಇದ್ದರು.

ಜಾಕಿಸ್ ಅಸೋಸಿಯೇಶನ್ ಆಫ್ ಇಂಡಿಯಾ ವಾರ್ಷಿಕ ಸಭೆ: ನೂತನ ಆಪ್ ಹಾಗೂ ವೆಬ್ ಸೈಟ್ ಲಾಂಚ್
The Jockeys Association of India Annual General Body meeting 2018- 2019 was held on 11Jun 2019 at the M. Chinnaswamy Stadium .

website developers in mysore