ತಲೈವಾ ‘ಇನ್ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್’ ಪ್ರೋಮೋ ರಿಲೀಸ್ !

ಬೆಂಗಳೂರು, ಫೆಬ್ರವರಿ 28, 2020 (www.justkannada.in): ಬೇರ್ ಗ್ರಿಲ್ಸ್ ಹೊಸ ಸರಣಿ ‘ಇನ್ ಟು ದಿ ವೈಲ್ಡ್ ವಿದ್ ಬೇರ್ ಗ್ರಿಲ್ಸ್’ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಭಾಗವಹಿಸಿದ್ದ ಕಾರ್ಯಕ್ರಮದ ಪ್ರೋಮೋ ಒಂದನ್ನು ಚಾನಲ್ ಬಿಡುಗಡೆ ಮಾಡಿದೆ.

ಡಿಸ್ಕವರಿ ಚಾನೆಲ್’ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಇದು ಇನ್ ಟು ದಿ ವೈಲ್ಡ್ ವಿದ್ ಬೇರ್ ಗ್ರಿಲ್ಸ್ ಸರಣಿಯ ಮೊದಲ ಕಾರ್ಯಕ್ರಮವಾಗಿರಲಿದ್ದು, ಸುಮಾರು 40 ಸೆಕೆಂಡ್ ಗಳ ಪ್ರೋಮೋ ಬಿಡುಗಡೆ ಮಾಡಿದೆ.

ಈ ಕಾರ್ಯಕ್ರಮದ ಪ್ರೀಮಿಯರ್ ಮಾರ್ಚ್ ತಿಂಗಳ 23ರಂದು ರಾತ್ರಿ 8 ಗಂಟೆಗೆ ನಡೆಯಲಿದೆ. ಕಳೆದ ತಿಂಗಳು ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಬೇರ್ ಗ್ರಿಲ್ಸ್ ಜತೆಗೆ ರಜನಿಕಾಂತ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.