ಥೈಲಾಂಡ್ ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಧ್ಯಪ್ರದೇಶ ಮೂಲದ ಬೆಂಗಳೂರು ಟೆಕ್ಕಿ.

kannada t-shirts

 

ಬ್ಯಾಂಕಾಕ್, ಅ.11, 2019 : ಸೆಮಿನಾರ್ ನಲ್ಲಿ ಭಾಗವಹಿಸಲು ಥೈಲಾಂಡ್ ಗೆ ತೆರಳಿದ್ದ ಮಧ್ಯ ಪ್ರದೇಶ ಮೂಲದ ಬೆಂಗಳೂರಿನ ಟೆಕ್ಕಿಯೊಬ್ಬರು ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದು, ಆಕೆಯ ಮೃತದೇಹ ಭಾರತಕ್ಕೆ ತರಲು ಪೋಷಕರು ಹರಸಾಹಸ ಪಡುತ್ತಿರುವ ಘಟನೆ ನಡೆದಿದೆ.

ಮೃತಪಟ್ಟ ಯುವತಿಯನ್ನು ಪ್ರಜ್ಞಾ ಎಂದು ಗುರುತಿಸಲಾಗಿದೆ. ಆಕೆ ಮೂಲತಃ ಮಧ್ಯಪ್ರದೇಶದ ಛಾತ್ರಾಪುರದವರು. ಕಳೆದ ಕೆಲ ವರ್ಷಗಳಿಂದ ಪ್ರಜ್ಞಾ, ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಸಂಸ್ಥೆ ಪರವಾಗಿ ಸೆಮಿನಾರ್ ನಲ್ಲಿ ಭಾಗವಹಿಸಲು ಅಕ್ಟೋಬರ್ 7ರಂದು ಥೈಲ್ಯಾಂಡ್‍ಗೆ ತೆರಳಿದ್ದರು. ವಿಪರ್ಯಾಸವೆಂದರೆ ಸೆಮಿನರ್ ಶುರು ಆಗುವ ಮೊದಲೇ ಪ್ರಜ್ಞಾ ರಸ್ತೆ ಅಪಘಾತದಲ್ಲಿ ಮೃತಪಟ್ಟರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‍ನಾಥ್ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವೀಟ್ ಮೂಲಕ ಮೃತ ಯುವತಿ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.

ಸಿಎಂ ಕಮಲನಾಥ್ ಅವರು ಪ್ರಜ್ಞಾ ಸಾವಿಗೆ ಸಂತಾಪ ಸೂಚಿಸಿ, ಆಕೆಯ ಕುಟುಂಬಸ್ಥರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ ಪ್ರಜ್ಞಾ ಕುಟುಂಬದ ಯಾವುದೇ ಸದಸ್ಯರ ಬಳಿ ಪಾಸ್‍ಪೋರ್ಟ್ ಇಲ್ಲದ ಕಾರಣ ಮೃತದೇಹ ಭಾರತಕ್ಕೆ ತರುವುದಕ್ಕೆ ಕಷ್ಟವಾಗುತ್ತಿದೆ ಎಂಬುದು ತಿಳಿದಿದೆ. ಆದರೆ, ಪ್ರಜ್ಞಾ ಕುಟುಂಬಸ್ಥರು ಆತಂಕಪಡುವ ಅವಶ್ಯಕತೆ ಇಲ್ಲ. ಸರ್ಕಾರ ನಿಮ್ಮ ಜೊತೆ ಇದೆ. ವಿದೇಶಾಂಗ ಸಚಿವರ ಜೊತೆ ಸರ್ಕಾರ ಮಾತನಾಡಿ ಮೃತದೇಹವನ್ನು ತರಲು ಪ್ರಯತ್ನಿಸುತ್ತೇವೆ. ಕುಟುಂಬದ ಸದಸ್ಯರು ಹೋಗಲು ಬಯಸಿದ್ದರೆ, ಅದಕ್ಕೂ ಸರ್ಕಾರ ಸಂಪೂರ್ಣ ವ್ಯವಸ್ಥೆ ಮಾಡಿಕೊಡುತ್ತೆ ಎಂದು ಟ್ವೀಟ್ ಮಾಡಿದ್ದಾರೆ.

——

key words : thailand-road-accident-techie-pragna-died-police-madhya.pradesh-kamalnath

website developers in mysore