ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಶಿಕ್ಷಣ ಸಚಿವರಿಗೆ  ಮತ್ತೆ ಪತ್ರ ಬರೆದು ಚಾಟಿ ಬೀಸಿದ ಸಾಹಿತಿ ದೇವನೂರ ಮಹದೇವ.

ಮೈಸೂರು,ಜೂನ್,3,2022(www.justkannada.in):  ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದ್ದು ಈ ಮಧ್ಯೆ ಸಾಹಿತಿ ದೇವನೂರ ಮಹದೇವ ಅವರು ಇದೀಗ ಮತ್ತೆ ಶಿಕ್ಷಣ ಸಚಿವರಿಗೆ ಪತ್ರ ಬರೆದು ತಮ್ಮ ಪಠ್ಯ ಕೈಬಿಡುವಂತೆ ಚಾಟಿ ಬೀಸಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣ ವಿವಾದ ಭುಗಿಲೆದ್ದ ಬೆನ್ನಲ್ಲೆ ಸಾಹಿತಿ ದೇವನೂರ ಮಹದೇವ ಪತ್ರ ಬರೆದು ತಮ್ಮ ಪಠ್ಯ ಕೈಬಿಡುವಂತೆ ಮನವಿ ಮಾಡಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ್ಧ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಈ ಹಂತದಲ್ಲಿ ದೇವನೂರು ಮಹಾದೇವ ಅವರ ಬರಹವನ್ನು ಕೈಬಿಡಲು ಸಾಧ್ಯವಿಲ್ಲ. ಪರಿಷ್ಕೃತಪಠ್ಯವನ್ನೇ ಮುಂದುವರೆಸಲಾಗುವುದು ಎಂದಿದ್ದರು.

ಇದೀಗ ಮತ್ತೆ ಪತ್ರ ಬರೆದಿರುವ ದೇವನೂರ ಮಹದೇವ ಅವರು, 10ನೇ ತರಗತಿ ಪಠ್ಯದಲ್ಲಿ ನನ್ನ ಪಠ್ಯ ಕೈಬಿಡುವಂತೆ ಮನವಿ ಮಾಡಿದ್ದೆ.  ಆದರೂ ನನ್ನ ಮನವಿ ಪರಿಗಣಿಸಿಲ್ಲ. ನಿಮ್ಮ ಧೋರಣೆ ದಬ್ಬಾಳಿಕೆ ಅನ್ನಿಸುತ್ತೆ.  ಪಠ್ಯ ಪರಿಷ್ಕರಣೆ ವಿವಾದ ಮುಂದುವರೆಯಬಾರದು. ನೀವು ಪರಿಷ್ಕೃತ ಮುದ್ರಣವೇ ಜಾರಿ ಎಂದು ಹೇಳಿದ್ದೀರಿ. ಕ್ಷಮಿಸಿ ನಿಮ್ಮ ಈ ಧೋರಣೆಯು ನನಗೆ ದಬ್ಬಾಳಿಕೆ ಅನಿಸಿತು ಎಂದಿದ್ದಾರೆ.

Key words: Textbook-revision-controversy-Devanura Mahadeva-Minister

ENGLISH SUMMARY…

Text book curriculum row: Litterateur Devanuru Mahadeva writes to Education minister again
Mysuru, June 3, 2022 (www.justkannada.in): The row over textbook curriculum in the state is gaining heat. Litterateur Devanuru Mahadeva has written a letter to the Education Minister again demanding him to omit the contaminated text.
As soon as the row commenced Devanuru Mahadeva had written a letter to the Minister demanding him to omit the text. The Minister B.C.Nagesh had rejected Devanuru Mahadeva’s appeal.
Hence, Mahadeva has written a letter again. He mentioned the Minister’s attitude as an atrocity. “The textbook curriculum row shouldn’t continue. You say that the same text printing will continue. I apologize, your attitude appears atrocious to me,” he mentioned in his letter.
Keywords: Litterateur Devanuru Mahadeva/ Education Minister B.C. Nagesh