ಟೆಸ್ಟ್ ಕ್ರಿಕೆಟ್: ಗಾಯಾಳುಗಳ ಪಟ್ಟಿಗೆ ಹೊಸ ಸೇರ್ಪಡೆ, ರಿಷಬ್ ಪಂತ್ ಔಟ್ !

ಸಿಡ್ನಿ, ಜನವರಿ 09, 2021 (www.justkannada.in): ಆಸಿಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಬ್ಯಾಟಿಂಗ್ ವೇಳೆ ರಿಷಬ್ ಪಂತ್ ಗಾಯಗೊಂಡು ಹೊರನಡೆದಿದ್ದಾರೆ.

ಪಂತ್ ಅವರ ಎಡ ಮೊಣಕೈಗೆ ಗಾಯವಾಗಿದ್ದು , ಸ್ಕ್ಯಾನ್ ಮಾಡಲು ಆಸ್ಪತ್ರೆಗೆ ರವಾನಿಸಲಾಗಿದೆ.

ನೋವು ಶಮನ ಮಾಡುವ ಟ್ಯಾಬ್ಲೆಟ್ ತೆಗೆದುಕೊಂಡು ಬ್ಯಾಟಿಂಗ್ ಮುಂದುವರಿಸಿದ್ದರು . ಆದರೆ ಇದೀಗ ಪಂತ್ ಅಲಭ್ಯರಾಗಿದ್ದಾರೆ.

ಇದೀಗ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಆಟಗಾರ ವೃದ್ಧಿಮಾನ್ ಸಹಾ ಹೆಗಲಿಗೆ ಬಿದ್ದಿದೆ.