ಬೈಕ್ -ಲಾರಿ ನಡುವೆ ಭೀಕರ ಅಪಘಾತ: ದ್ವಿಚಕ್ರವಾಹನ ಸವಾರ ಸಾವು…

ಮೈಸೂರು, ಸೆ,22,2020(www.justkannada.in): ಎದುರಿನಿಂದ ಬರುತ್ತಿದ್ದ ಬೈಕ್ ಗೆ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಇಂದು ಮಧ್ಯಾಹ್ನ ಮೈಸೂರಿನಲ್ಲಿ ನಡೆದಿದೆ.jk-logo-justkannada-logo

ಮೈಸೂರಿನ ರಮಾಬಾಯಿ ನಗರದ ಬಳಿ  ಈ ಘಟನೆ ನಡೆದಿದೆ. ಮೃತ ಬೈಕ್ ಸವಾರನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.  ಎದುರಿನಿಂದ ಬರುತ್ತಿದ್ದ ಬೈಕ್ ಗೆ ಲಾರಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದ್ದು,  ಲಾರಿ ಚಕ್ರಕ್ಕೆ ಬೈಕ್ ಸಿಲುಕಿ ಬೈಕ್ ಸವಾರನ ತಲೆಯ ಭಾಗ ತುಂಡಾಗಿದೆ.terrible-accident-bike-lorry-death-rider-mysore

ಚಕ್ರಕ್ಕೆ ಸಿಲುಕಿದ ಬೈಕ್ ಸವಾರನನ್ನು ಲಾರಿ ಬಹಳಷ್ಟು ದೂರದ ತನಕ ಎಳೆದೊಯ್ದಿದ್ದು ಈ ವೇಳೆ ತಲೆ ಭಾಗ ತುಂಡಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ.  ಈ ಕುರಿತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  terrible- accident – bike-lorry-death – rider-mysore