ಕಣ್ಣೀರಿನ ವಿದಾಯ ಹೇಳಿದ ಟೆನಿಸ್ ದಿಗ್ಗಜ ರೋಜರ್ ಫೆಡರರ್

Promotion

ಬೆಂಗಳೂರು, ಸೆಪ್ಟೆಂಬರ್ 24, 2022 (www.justkannada.in): ಟೆನಿಸ್‌ ದಿಗ್ಗಜ ರೋಜರ್‌ ಫೆಡರರ್ ಅವರ ಎರಡು ದಶಕಗಳ ವೃತ್ತಿ ಜೀವನ ಅಧಿಕೃತವಾಗಿ ಅಂತ್ಯವಾಗಿದೆ.

ರಾಫೆಲ್‌ ನಡಾಲ್‌ ಜೊತೆ ದಿ ಲೆವರ್‌ ಕಪ್‌ ಪುರುಷರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಟೆನಿಸ್‌ ದಿಗ್ಗಜ ರೋಜರ್‌ ಫೆಡರರ್ ಅವರ ಎರಡು ದಶಕಗಳ ವೃತ್ತಿ ಜೀವನ ಅಧಿಕೃತವಾಗಿ ಅಂತ್ಯವಾಯಿತು.

ಪಂದ್ಯದ ಬಳಿಕ ಟೆನಿಸ್‌ ಕೋರ್ಟ್‌ ಹಾಗೂ ಅದರ ಹೊರಗಡೆ ಟಿನಿಸ್‌ ಆಟಗಾರರ ಜೊತೆಗೆ ಅಭಿಮಾನಿಗಳ ಪಾಲಿಗೂ ಭಾವನಾತ್ಮಕ ಕ್ಷಣವಾಯಿತು.

ಪಂದ್ಯದ ಬಳಿಕ ರೋಜರ್‌ ಫೆಡರರ್‌ ಅವರು ತಮ್ಮ ಭಾವನೆಗಳನ್ನು ನಿಯಂತ್ರಿಸಲಾಗದೆ ಕಣ್ಣೀರಿಟ್ಟರು. ಈ ವೇಳೆ ಇವರ ಪಕ್ಕದಲ್ಲಿಯೇ ಇದ್ದ ರಾಫೆಲ್‌ ನಡಾಲ್ ಕೂಡ ಬಿಕ್ಕಿ-ಬಿಕ್ಕಿ ಅತ್ತರು. ಈ ವಿಡಯೋ ಹಾಗೂ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿವೆ.