’ಸಿರಿವೆನ್ನಲ’ ಸೀತಾರಾಮ ಶಾಸ್ತ್ರಿ ನಿಧನ; ಮೋದಿ ಸಂತಾಪ, ತೆಲುಗು ಚಿತ್ರರಂಗ ಕಂಬನಿ

kannada t-shirts

 

ಹೈದರಾಬಾದ್‌, ಡಿ.01, 2021 : (www.justkannada.in news ) ತೆಲುಗು ಚಿತ್ರರಂಗದ ಪ್ರಮುಖ ಗೀತೆರಚನೆಕಾರ ಪದ್ಮಶ್ರೀ ಪುರಸ್ಕೃತ ’ಸಿರಿವೆನ್ನಲ’ ಸೀತಾರಾಮ ಶಾಸ್ತ್ರಿ (66) ಅವರು ಶ್ವಾಸಕೋಶದ ಕ್ಯಾನ್ಸರ್ ಸಂಬಂಧಿತ ತೊಂದರೆಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನ.

ನ್ಯುಮೋನಿಯಾದಿಂದ ಬಳಲುತ್ತಿದ್ದರಿಂದ ಅವರನ್ನು ನ.24ರಂದು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಮಂಗಳವಾರ ಇಹಲೋಕ ತ್ಯಜಿಸಿದರು.

ಸಂತಾಪ :

ಸೀತಾರಾಮ ಶಾಸ್ತ್ರಿ ಅವರ ನಿಧನಕ್ಕೆ ಪ್ರಧಾನಿ ಮೋದಿ, ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ತೆಲುಗು ಚಿತ್ರರಂಗದ ಚಿರಂಜೀವಿ, ಮಹೇಶ್ ಬಾಬು, ಜ್ಯೂ.ಎನ್ಟಿಆರ್..ಸೇರಿದಂತೆ ಹಲವಾರು ಖ್ಯಾತ ನಾಮ ಕಲಾವಿದರು ಶಾಸ್ತ್ರಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಸೀತಾರಾಮ ಶಾಸ್ತ್ರಿ ಅವರ ಕುರಿತು :

ಸಿನಿಮಾ ಸಾಹಿತ್ಯ ಎಂದರೆ ಮೂಗು ಮುರಿಯುತ್ತಿದ್ದ ವೇಳೆ, ಈ ಅಭಿಪ್ರಾಯವನ್ನು ಸುಳ್ಳಾಗಿಸಿ, ಸಿನಿಮಾ ಸಾಹಿತ್ಯಕ್ಕೂ ಶುದ್ಧ ಸಾಹಿತ್ಯಕ್ಕೂ ವ್ಯತ್ಯಾಸ ಇಲ್ಲ ಎಂಬುದು ತಮ್ಮ ಹಾಡುಗಳ ಮೂಲಕ ನಿರೂಪಿಸಿದವರು ತೆಲುಗು ಸಿನಿಮಾ ಗೀತರಚನಕಾರ ‘ಸಿರಿವೆನ್ನೆಲ’ ಸೀತಾರಾಮ ಶಾಸ್ತ್ರಿ.”,

ಹೀಗೆ ಸಿನಿಮಾ ಹಾಡುಗಳಲ್ಲಿ ಘನವಾದ ಸಾಹಿತ್ಯವನ್ನು ಒದಗಿಸಿದ ದೇವುಲಪಲ್ಲಿ ಕೃಷ್ಣಶಾಸ್ತ್ರಿ, ವೇಟೂರಿ ಸುಂದರ ರಾಮಮೂರ್ತಿ, ಸಿ. ನಾರಾಯಣ ರೆಡ್ಡಿ, ಆತ್ರೇಯ ಇಂಥ ಧೀಮಂತರ ಸಾಲಿಗೆ ಸೇರಿದವರು ‘ಸಿರಿವೆನ್ನೆಲ’.

ಕಲಾತಪಸ್ವಿಯೆಂದೇ ಖ್ಯಾತರಾದ ಕೆ. ವಿಶ್ವನಾಥ್ ಅವರ ‘ಸಿರಿವೆನ್ನೆಲ’ (1986) ಸಿನಿಮಾಕ್ಕೆಂದು ಸೀತಾರಾಮ ಶಾಸ್ತ್ರಿ ಬರೆದ ಹಾಡುಗಳು ಎಷ್ಟು ಜನಪ್ರಿಯವಾಯಿತೆಂದರೆ ಅವರ ಹೆಸರಿನ ಜೊತೆಗೆ ಸಿನಿಮಾ ಹೆಸರೂ ಸೇರಿಕೊಂಡು ಅವರು ‘ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ’ ಎಂದೇ ಪ್ರಸಿದ್ಧರಾದರು.

ಈ ಸಿನಿಮಾಕ್ಕೆ ಅವರಿಗೆ ‘ನಂದಿ’ ಪ್ರಶಸ್ತಿ ಬಂದಿತು. ಮಾತ್ರವಲ್ಲ ಈ ತನಕ ಒಟ್ಟು 11 ನಂದಿ ಪ್ರಶಸ್ತಿ ಲಭಿಸಿದೆ. ಇದು ಅವರ ಸಾಹಿತ್ಯದ ಶಕ್ತಿ ಹಾಗೂ ಜನಪ್ರಿಯತೆಗೆ ಸಾಕ್ಷಿ.

key words : telugu-film-industry-Sirivennela Seetharama Sastry- Dies

summary :

Renowned Telugu lyricist Sirivennela Seetharama Sastry died on Tuesday. The 66-year-old lyricist, who was awarded the Padma Shri in 2019, reportedly died of lung cancer.

website developers in mysore