ಅಳಿವಿನಂಚಿಯಲ್ಲಿರುವ ಕಲೆಗಳಿಗೆ OTT Platform ! “Only ಕನ್ನಡ”(OK) ಸರ್ವೇಯಲ್ಲಿ ನಿಮ್ಮ ಅಭಿರುಚಿ, ಅಭಿಪ್ರಾಯ ತಿಳಿಸಿ….

ಬೆಂಗಳೂರು, ಜುಲೈ 08, 2021 (www.justkannada.in): ಮರೆಯಾಗುತ್ತಿರುವ ಜಾನಪದ, ಕಲೆ, ಸಂಗೀತ, ನಾಟಕಗಳಿಗೆ ಮರಳಿ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಯೋಗ್ ಸ್ಟೂಡಿಯೋ ವತಿಯಿಂದ ಆರಂಭವಾಗುತ್ತಿರುವ OTT Platform – “Only ಕನ್ನಡ”(OK) ನಿಮ್ಮ ಸಲಹೆ, ಅಭಿಪ್ರಾಯ ಅಭಿರುಚಿ ಕುರಿತ ಸಮೀಕ್ಷೆ ಆರಂಭಿಸಿದೆ.

ಕೊರೊನಾ ಕಾಲಘಟ್ಟದಲ್ಲಿ ಕಲಾವಿದರಿಗೆ ಪ್ರದರ್ಶನ ಅವಕಾಶಗಳು ಕಡಿಮೆಯಾಗಿವೆ. ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಜನ ರಂಗ ಮಂದಿರಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ಜತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಲೆಗಳು ಅಳಿವಿನ ಅಂಚಿನಲ್ಲಿವೆ. ಇವುಗಳಿಗೆ ವೇದಿಕೆ ಕಲ್ಪಿಸಿ ಪುನರುಜ್ಜೀವನಗೊಳಿಸಲು “Only ಕನ್ನಡ”(OK) ಅವಕಾಶ ಕಲ್ಪಿಸುತ್ತಿದೆ.

ಈ ನಿಟ್ಟಿನಲ್ಲಿ ನಿಮ್ಮ ಆಲೋಚನೆ, ಅಭಿರುಚಿಗಳ ಕುರಿತು ಸರ್ವೇ ಮಾಡುತ್ತಿದೆ. ಈಗಾಗಲೇ ನೂರಾರು ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೀವು ಕೂಡ ಈ ಕೆಳಗಿನ ಲಿಂಕ್ ಗಳನ್ನು ಬಳಸಿ ಸರ್ವೇಯಲ್ಲಿ ಭಾಗವಹಿಸಬಹುದು.

www.prayogstudio.com
Kannada Survey Form – https://forms.gle/5MPz1M3JwbLG1Kgu6
English Survey Form – https://forms.gle/34FxEQEHsAZUQbvx5

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರದರ್ಶಕ ಕಲೆಗಳು (ಪಾರ್ಫಾರ್ಮಿಂಗ್ ಆರ್ಟ್) ಅಳಿವಿನ ಅಂಚಿನಲ್ಲಿವೆ ಎಂಬ ಆತಂಕದ ನಡುವೆಯೇ ನಮಗಿಷ್ಟವಾದ ಪ್ರದರ್ಶಕ ಕಲೆಗಳನ್ನು ನೋಡಲು ಅವಕಾಶ ಸಿಗುತ್ತಿಲ್ಲ ಎಂಬ ಕೊರಗು ಸಾಕಷ್ಟು ಕಲಾಸಕ್ತರಲ್ಲಿದೆ. ಈ ಕೊರಗನ್ನು ನಿವಾರಿಸುವ ಜತೆಗೆ ಕಲಾವಿದರೂ ಅವಕಾಶ ನೀಡಿ ನಾಶವಾಗುತ್ತಿರುವ ಕಲೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರಯೋಗ ಸ್ಟೂಡಿಯೋದ “Only ಕನ್ನಡ”(OK) OTT Platform ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ.

ಪ್ರಯೋಗ ಸ್ಟೂಡಿಯೋದ “Only ಕನ್ನಡ”(OK) OTT Platform ಆರಂಭಿಕ ಹಂತದಲ್ಲಿ ಕಲಾಸಕ್ತರಿಂದ ಸರ್ವೇ ನಡೆಸುತ್ತಿದ್ದು, ನಿಮ್ಮ ಅಭಿರುಚಿ, ಆಸಕ್ತಿ ಕುರಿತ ಮಾಹಿತಿಯನ್ನು ಸರ್ವೇಯಲ್ಲಿ ಹಂಚಿಕೊಳ್ಳಬಹುದಾಗಿದೆ.