ಟೆಸ್ಟ್, ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾದತ್ತ ಪಯಣ ಬೆಳೆಸಿದ ಟೀಂ ಇಂಡಿಯಾ

ಬೆಂಗಳೂರು, ಡಿಸೆಂಬರ್ 16, 2021 (www.justkannada.in): ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ ಸರಣಿಗಾಗಿ ಟೀಮ್ ಇಂಡಿಯಾ ಆಟಗಾರರು ಪ್ರಯಾಣ ಬೆಳೆಸಿದ್ದಾರೆ.

ಮೊದಲ ಟೆಸ್ಟ್ ಪಂದ್ಯವು ಡಿಸೆಂಬರ್ 26ರಂದು ಆರಂಭವಾಗಲಿದೆ. ಟೆಸ್ಟ್ ಸರಣಿಯ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ಏಕದಿನ ಹಾಗೂ ಟ್ವೆಂಟಿ-20 ತಂಡದ ನಾಯಕ ರೋಹಿತ್ ಶರ್ಮಾ, ಸ್ನಾಯು ಸೆಳೆತಕ್ಕೊಳಗಾಗಿದ್ದರಿಂದ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ.

ಈ ನಡುವೆ ಮಾತನಾಡಿರುವ ನಾಯಕ ವಿರಾಟ್ ಕೊಹ್ಲಿ, ತಮ್ಮ ಹಾಗೂ ರೋಹಿತ್ ಶರ್ಮಾ ನಡುವೆ ಯಾವುದೇ ಭಿನ್ನಭಿಪ್ರಾಯವಿಲ್ಲ. ಏಕದಿನ ಹಾಗೂ ಟ್ವೆಂಟಿ-20ನಲ್ಲಿ ಅವರ ನಾಯಕತ್ವಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ವೇಳಾಪಟ್ಟಿ ಇಂತಿದೆ:

ಟೆಸ್ಟ್ ಸರಣಿ:
ಮೊದಲ ಟೆಸ್ಟ್: ಡಿ.26, ಸೆಂಚುರಿಯನ್
ದ್ವಿತೀಯ ಟೆಸ್ಟ್: ಜ.3, ಜೋಹಾನ್ಸ್‌ಬರ್ಗ್
ತೃತೀಯ ಟೆಸ್ಟ್: ಜ.11, ಕೇಪ್ ಟೌನ್

ಏಕದಿನ ಸರಣಿ:
ಮೊದಲ ಏಕದಿನ: ಜ.19, ಪಾರ್ಲ್
ದ್ವಿತೀಯ ಏಕದಿನ: ಜ.21, ಪಾರ್ಲ್
ಅಂತಿಮ ಏಕದಿನ: ಜ.23, ಕೇಪ್ ಟೌನ್.