ಟಿ-20 ವಿಶ್ವಕಪ್: ಟೀಂ ಇಂಡಿಯಾದಲ್ಲಿ ಚೇಂಜ್: ಶಾರ್ದೂಲ್ ಠಾಕೂರ್’ಗೆ ಲಕ್ ! ಅಕ್ಸರ್ ಪಟೇಲ್ ಔಟ್

ಬೆಂಗಳೂರು, ಅಕ್ಟೋಬರ್ 14, 2021 (www.justkannada.in): ಟೀಂ 20 ವಿಶ್ವಕಪ್ ತಂಡದ 15 ಜನರ ತಂಡದಲ್ಲಿ ಅಕ್ಸರ್ ಪಟೇಲ್ ಬದಲಿಗೆ ಆಲ್‌ ರೌಂಡರ್ ಶಾರ್ದೂಲ್ ಠಾಕೂರ್ ಸ್ಥಾನ ಪಡೆದಿದ್ದಾರೆ.

ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಶಾರ್ದೂಲ್ ಅವರನ್ನು ತಂಡ ನಿರ್ವಹಣೆಯೊಂದಿಗೆ ಚರ್ಚಿಸಿದ ನಂತರ ಸೇರಿಸಲು ನಿರ್ಧಾರ ಮಾಡಿದೆ.

ತಂಡದಲ್ಲಿ ಬದಲಾವಣೆಗೆ ಬಿಸಿಸಿಐ ಕಾರಣವನ್ನು ನಿರ್ದಿಷ್ಟಪಡಿಸದಿದ್ದರೂ, ಟೀಮ್ ಇಂಡಿಯಾ ತಂಡದಲ್ಲಿ ವೇಗದ ಬೌಲಿಂಗ್ ಆಲ್ರೌಂಡರ್ ಆಯ್ಕೆ ಅಗತ್ಯವಾಗಿರಬಹುದು, ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್‌ನಲ್ಲಿ ಬೌಲ್ ಮಾಡುವ ಸಾಧ್ಯತೆಯಿಲ್ಲ.

ಐಸಿಸಿ ಟಿ 20 ವಿಶ್ವಕಪ್‌ಗೆ ಭಾರತ ತಂಡ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ.