ಎಲ್ಲಾ ಆಸ್ತಿಗಳ ತೆರಿಗೆ ಆನ್‌ಲೈನ್ ತಂತ್ರಾಂಶದ ಮೂಲಕ ಪಾವತಿ : ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ

ಮೈಸೂರು,ಡಿಸೆಂಬರ್,20,2020(www.justkannada.in) :ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿಗಳ ತೆರಿಗೆಯನ್ನು 2020-21ನೇ ಸಾಲಿನಿಂದ ಆನ್‌ಲೈನ್ ತಂತ್ರಾಂಶದ ಮೂಲಕ ಪಾವತಿಸಿಕೊಳ್ಳಲಾಗುತ್ತಿದೆ ಎಂದು ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ.Teachers,solve,problems,Government,bound,Minister,R.Ashokಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಆಸ್ತಿ ಮಾಲೀಕರ ಅನುಕೂಲಕ್ಕಾಗಿ ಹಾಗೂ ಆಸ್ತಿ ತೆರಿಗೆ ಲೆಕ್ಕಾಚಾರವನ್ನು ಆಸ್ತಿದಾರರು ಮತ್ತಷ್ಟು ಸುಲಭವಾಗಿ ತಿಳಿದುಕೊಳ್ಳುವುದಕ್ಕಾಗಿ ಸದರಿ ಆನ್‌ಲೈನ್ ತಂತ್ರಾಂಶವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಸಾರ್ವಜನಿಕರು ಪಾಲಿಕೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಮನೆಯಿಂದಲೇ ನೇರವಾಗಿ ಮಾಹಿತಿ ಪಡೆಯಬಹುದಾದ ಉಪಯುಕ್ತ ಯೋಜನೆಯಾಗಿದೆ. ಭಾರತ ದೇಶದಲ್ಲಿ ಪಪಥಮ ಭಾರಿಗೆ ಮೈಸೂರು ಮಹಾನಗರ ಪಾಲಿಕೆಯು ಮಹಾತ್ವಾಕಾಂಕ್ಷೆಯ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

Tax-all-assets-online-software-Payment-Municipal-Commissioner-Gurudat Hegde

ಆಸ್ತಿ ತೆರಿಗೆಯ ಆನ್‌ಲೈನ್ ತಂತ್ರಾಂಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಆಸ್ತಿಗಳ ಸಂಪೂರ್ಣ ಸರ್ವೆ ಮಾಡುವುದು ಮತ್ತು ಆಸ್ತಿಗಳ ಜಿಯೋ ಸ್ಟಾಂಪಿಂಗ್ ಕಾರ್ಯ ಮಾಡುವುದು ಅವಶ್ಯಕವಾಗಿರುತ್ತದೆ ಅಂದರೆ ಆಸ್ತಿಗಳ ಒಟ್ಟು ವಿಸ್ತೀರ್ಣ, ಅಂತಸ್ತು ಮತ್ತು ಆಸ್ತಿಯ ಉಪಯೋಗದ ಬಗ್ಗೆ ಸರ್ವೆ ಮಾಡಿ ಕಟ್ಟಡದ 3 ಕಡೆಯ ಛಾಯಾಚಿತ್ರ (ಜಿಯೋ ಸ್ಯಾಂಪಿಂಗ್) ತೆಗೆಯುವುದರ ಜೊತೆಗೆ ಪ್ರತ್ಯೇಕವಾದ QR code ಸ್ಟಿಕ್ಕರ್ ಅನ್ನು ಆಸ್ತಿಗಳಿಗೆ ಅಂಟಿಸುವ ಕಾರ್ಯವನ್ನು ನಿರ್ವಹಿಸಲಾಗುತ್ತದೆ.

ಈ ರೀತಿ ಪ್ರತಿ ಆಸ್ತಿಗೆ ಒಂದೊಂದು QR code ನೀಡುವುದರಿಂದ ಆಸ್ತಿ ಮಾಲಿಕರು ಆಸ್ತಿ ತೆರಿಗೆ ಪಾವತಿ ಸೇರಿದಂತೆ ಪಾಲಿಕೆಗೆ ಸಂಬಂಧಿಸಿದ ಇನ್ನಿತರೇ ಉಪಯುಕ್ತ ಮಾಹಿತಿಗಳನ್ನು ಅಂದರೆ ನೀರಿನ ತೆರಿಗೆ ಪಾವತಿ, ಉದ್ದಿಮ ರಹದಾರಿ, ಸ್ವಚ್ಛ ಸರ್ವೇಕ್ಷಣಾ ಮಾಹಿತಿಗಳು ಹಾಗೂ ಇತರೆ ಉಪಯುಕ್ತ ಸೇವೆಗಳನ್ನು QR code Scan ಮಾಡುವ ಮೂಲಕ ತಿಳಿದುಕೊಳ್ಳಲು ಸಹಾಯವಾಗುತ್ತದೆ.Tax-all-assets-online-software-Payment-Municipal-Commissioner-Gurudat Hegdeಆದುದರಿಂದ, ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿ ನಿಮ್ಮ ಮನೆಗಳಿಗೆ ಸರ್ವ ಕಾರ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿ, ಸಿಬ್ಬಂದಿ ಕೇಳುವ ಮಾಹಿತಿಗಳು,  ದಾಖಲೆಗಳನ್ನು ಒದಗಿಸುವುದರ ಜೊತೆಗೆ ಪಾಲಿಕೆ ಸಿಬ್ಬಂದಿಗಳಿಗೆ ಸಹಕಾರ ನೀಡಲು ಮತ್ತು ಆಸ್ತಿಯ ಛಾಯಾಚಿತ್ರ ತೆಗೆಯಲು ಅವಕಾಶ ಮಾಡಲು ಎಲ್ಲಾ ಆಸ್ತಿ ಮಾಲಿಕರು, ನಾಗರಿಕರಲ್ಲಿ ಮನವಿ ಮಾಡಲಾಗಿದೆ.

key words : Tax-all-assets-online-software-Payment-Municipal-Commissioner-Gurudat Hegde