ಚಾಲೆಂಜಿಂಗ್ ಸ್ಟಾರ್ ‘ರಾಬರ್ಟ್’ ವಿಳಂಬಕ್ಕೆ ಕಾರಣ ತಿಳಿಸಿದ ತರುಣ್ ಸುಧೀರ್

Promotion

ಬೆಂಗಳೂರು, ಸೆಪ್ಟೆಂಬರ್ 03, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ‘ರಾಬರ್ಟ್’ ಚಿತ್ರ ತಡವಾಗಲು ಕಾರಣವನ್ನು ನಿರ್ದೇಶಕ ತರುಣ್ ಸುಧೀರ್ ಬಹಿರಂಗ ಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ತರುಣ್, ಕುರುಕ್ಷೇತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಒಡೆಯ ಕೂಡ ರಿಲೀಸ್ ಗೆ ಸಿದ್ಧವಾಗಿದೆ. ಹೀಗಾಗಿ ‘ರಾಬರ್ಟ್’ ಚಿತ್ರವನ್ನು ಕೊಂಚ ವಿಳಂಬ ಮಾಡಿದ್ದು, ಕೆಲವೇ ದಿನಗಳಲ್ಲಿ ದೊಡ್ಡ ಸುದ್ದಿ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಅಂದಹಾಗೆ ಕೆಲ ದಿನಗಳ ಹಿಂದಷ್ಟೇ ರಾಬರ್ಟ್ ಚಿತ್ರಕ್ಕಾಗಿ ದರ್ಶನ್, ಸ್ವಿಮ್ಮಿಂಗ್ ಪೂಲ್ ನಲ್ಲಿ ನಡೆದ ಸ್ಟಂಟ್ ದೃಶ್ಯದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈ ದೃಶ್ಯಗಳಿಗೆ ಮಾರ್ಗದರ್ಶನ ಮಾಡಲೆಂದೇ ಮುಂಬೈನಿಂದ ನಾಲ್ವರು ಈಜು ಪರಿಣಿತರನ್ನು ಕರೆಯಿಸಿಕೊಳ್ಳಲಾಗಿತ್ತು.