ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ-ಪಾಲಿಕೆ ಅಧಿಕಾರಿಗಳಿಗೆ  ಶಾಸಕ ಜಿ.ಟಿದೇವೇಗೌಡ ಖಡಕ್ ಸೂಚನೆ….

kannada t-shirts

ಮೈಸೂರು,ಜ,10,2020(www.justkannada.in):  ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಶಾಸಕ ಜಿ.ಟಿ ದೇವೇಗೌಡ ಖಡಕ್ ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ  ಶಾಸಕ ಜಿ.ಟಿ ದೇವೇಗೌಡರ ನೇತೃತ್ವದಲ್ಲಿ  ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ನಗರ ಆಶ್ರಯ ವಸತಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಆಶ್ರಯ ಯೋಜನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಹೆಚ್ಚುವರಿ ಆಯುಕ್ತ ಶಶಿಕುಮಾರ್, ಶಿವಾನಂದಮೂರ್ತಿ, ಎ.ಸಿ. ವೆಂಕಟರಾಜು, ತಹಶೀಲ್ದಾರ್ ರಕ್ಷಿತ್, ಇ.ಓ. ಕೃಷ್ಣ ಕುಮಾರನ್ ಹಾಗೂ ಪಾಲಿಕೆ ಅಧಿಕಾರಿಗಳು ಭಾಗಿಯಾಗಿದ್ದರು.

ಚಾಮುಂಡೇಶ್ವರಿ ಕ್ಷೇತ್ರದ ಆಶ್ರಯ ಉಚಿತ ನಿವೇಶನ ಆಯ್ಕೆಯಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ. ಹಲವರು ನಕಲಿ ಹೆಸರುಗಳ ಮೂಲಕ ಉಚಿತ ನಿವೇಶನ ಪಡೆದಿದ್ದಾರೆ ಎಂದು ಆಶ್ರಯ ಯೋಜನೆಯ ಹಗರಣದ ಬಗ್ಗೆ ಮಾಜಿ ಸಚಿವ ಜಿಟಿ ದೇವೇಗೌಡ ಕಿಡಿ ಕಾಡಿದರು.

ಜನವರಿ ಅಂತ್ಯದೊಳಗೆ ಆಶ್ರಯ ಫಲಾನುಭವಿಗಳ ಹೆಸರು ಪೈನಲ್ ಮಾಡಿ ನಿವೇಶನ ಹಂಚಬೇಕು. ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಪಾಲಿಕೆ ಅಧಿಕಾರಿಗಳಿಗೆ ಮಾಜಿ ಸಚಿವ ಜಿಟಿ ದೇವೇಗೌಡ ಸೂಚಿಸಿದರು.

Key words: Take action- against -corrupt -allocation –mysore-MLA GT Deve Gowda- notifies -officials.

website developers in mysore