ಟಿ20 ವಿಶ್ವಕಪ್‌ ಟೂರ್ನಿ ಆಯೋಜನೆ ಇಲ್ಲ: ಮುನ್ಸೂಚನೆ ನೀಡಿದ ಕ್ರಿಕೆಟ್‌ ಆಸ್ಟ್ರೇಲಿಯಾದ ಮುಖ್ಯಸ್ಥ

ಸಿಡ್ನಿ, ಜೂನ್ 17, 2020 (www.justkannada.in): ಈ ವರ್ಷ ಟಿ20 ವಿಶ್ವಕಪ್‌ ಟೂರ್ನಿಯ ಆಯೋಜನೆ ಅವಾಸ್ತವಿಕ ಎಂದಿದ್ದಾರೆ  ಕ್ರಿಕೆಟ್‌ ಆಸ್ಟ್ರೇಲಿಯಾದ ಮುಖ್ಯಸ್ಥ ಎರಾಲ್‌ ಎಡ್ಡಿಂಗ್ಸ್.

ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಬೇಕಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಕೂಡ ಆಸೀಸ್‌ ನೆಲದಲ್ಲಿ ಆಯೋಜನೆ ಆಗುವ ಭರವಸೆಯೂ ಚಿಗುರಿತ್ತು. ಆದರೀಗ ಈ ಭರವಸೆ ಈಡೇರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಇದರೊಂದಿಗೆ ಬಹು ನಿರೀಕ್ಷಿತ ಟೂರ್ನಿಯು 2022ಕ್ಕೆ ಮುಂದೂರುವುದು ಬಹುತೇಕ ಖಾತ್ರಿಯಾದಂತಿದೆ. ಇದು ಸಾಧ್ಯವಾದರೆ, ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ ಬಿಸಿಸಿಐಗೆ ಐಪಿಎಲ್‌ 2020 ಆಯೋಜಿಸಲು ಸಾಧ್ಯವಾಗಲಿದೆ.