ಕ್ರಿಕೆಟ್: ನಾಳೆಯಿಂದ ದಕ್ಷಿಣ ಆಫ್ರಿಕಾ-ಟೀಂ ಇಂಡಿಯಾ ಟಿ-20 ಫೈಟ್

ಧರ್ಮಶಾಲಾ, ಸೆಪ್ಟೆಂಬರ್ 14, 2019 (www.justkannada.in):
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-ಟ್ವೆಂಟಿ ಪಂದ್ಯ ನಾಳೆ (ಸೆಪ್ಟೆಂಬರ್ 15ಕ್ಕೆ) ಧರ್ಮಶಾಲಾದಲ್ಲಿ ನಡೆಯಲಿದೆ.

ಕೊಹ್ಲಿ ಪಡೆ ಹಿಮಾಚಲ ಪ್ರದೇಶದ ಧರ್ಮಶಾಲಾಕ್ಕೆ ಬಂದಿಳಿದಿದೆ. ಈ ವೇಳೆ ಟೀಂ ಇಂಡಿಯಾ ಆಟಗಾರರಿಗೆ ಅನಿರೀಕ್ಷಿತ ವೆಲ್​ಕಮ್ ಸಿಕ್ಕಿದೆ.

ಒಟ್ಟು ಮೂರು ಟಿ-ಟ್ವೆಂಟಿ ಪಂದ್ಯಗಳು ಹಾಗೂ ಮೂರು ಟೆಸ್ಟ್ ಪಂದ್ಯಗಳನ್ನು ಟೀಂ ಇಂಡಿಯಾ ಆಡಲಿದೆ. ಇದುವರೆಗೂ ದಕ್ಷಿಣ ಆಫ್ರಿಕಾದ ವಿರುದ್ಧ ತನ್ನ ಹೋಂ ಗ್ರೌಂಡ್​ನಲ್ಲಿ ಭಾರತ ಒಂದೇ ಒಂದು ಟಿ-ಟ್ವೆಂಟಿ ಪಂದ್ಯವನ್ನೂ ಗೆದ್ದಿಲ್ಲ. ಈ ಬಾರಿಯಾದರೂ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಳ್ಳಲಿದೆಯಾ ಕಾದು ನೋಡಬೇಕು.