ಪಠ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿದ್ಯಾವಿನ್ ಆ್ಯಪ್ ತರಗತಿಗಳ ಪರಿಚಯ : ಆ್ಯಪ್ ಸಂಸ್ಥಾಪಕ ಕೆ.ವಿ.ಪ್ರಕಾಶ್ 

ಮೈಸೂರು,ಮಾರ್ಚ್,13,2021(www.justkannada.in) :  ವಿದ್ಯಾವಿನ್  ಆನ್‌ಲೈನ್ ಶಿಕ್ಷಣ ಸಂಸ್ಥೆಯು ರಾಜ್ಯ ಪಠ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿದ್ಯಾವಿನ್ ಆ್ಯಪ್ ತರಗತಿಗಳನ್ನು ಪರಿಚಯಿಸಿದೆ ಎಂದು ಆ್ಯಪ್ ಸಂಸ್ಥಾಪಕ ಕೆ.ವಿ.ಪ್ರಕಾಶ್ ಹೇಳಿದರು.jkಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಾರ್ಟ್ ಅಪ್ ಇಂಡಿಯಾದಲ್ಲಿ ನೋಂದಣಿಯಾಗಿರುವ ರಾಜ್ಯದ ಮೊದಲ ಇ-ಲರ್ನಿಂಗ್ ಆ್ಯಪ್ ಎಂಬ ಹೆಗ್ಗಳಿಕೆ ಪಡೆದಿದೆ. ಇ-ಲರ್ನಿಂಗ್ ಶಿಕ್ಷಣವನ್ನು ಗ್ರಾಮೀಣ ಪ್ರದೇಶಕ್ಕೆ ಕೊಂಡೊಯ್ಯುವ ಆಶಯದಿಂದ ವಿದ್ಯಾವನ್ ಆ್ಯಪ್ ಸಿದ್ದಪಡಿಸಲಾಗಿದೆ ಎಂದರು.

ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮತ್ತು ದ್ವಿತೀಯ ಭಾಷೆ ಇಂಗ್ಲಿಷ್ ಪಾಠ ವ್ಯಾಕರಣವೂ ಇರಲಿದೆ

ವಿದ್ಯಾವಿನ್ ತಂಡದ ಅನುಭವಿ ಶಿಕ್ಷಕರಿಂದ ರೂಪಿಸಿರುವ ಆ್ಯಪ್‌ನಲ್ಲಿ ೧೦ನೇ ತರಗತಿಯ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪ್ರಮುಖ ವಿಷಯಗಳನ್ನು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮತ್ತು ದ್ವಿತೀಯ ಭಾಷೆ ಇಂಗ್ಲಿಷ್ ಪಾಠ ವ್ಯಾಕರಣವೂ ಇರಲಿದೆ ಎಂದು ಮಾಹಿತಿ ನೀಡಿದರು.

ಮೈಸೂರು,ಮಂಡ್ಯ,ಚಾಮರಾಜನಗರ ಜಿಲ್ಲೆಗಳ ೧೫೦ ಆಯ್ದ ವಿದ್ಯಾರ್ಥಿಗಳಿಗೆ ವಿದ್ಯಾವಿನ್ ಆ್ಯಪ್‌ ಉಚಿತ

ವಿದ್ಯಾವಿನ್ ಸಂಸ್ಥೆಯು ಈಗಾಗಲೇ ರಾಜ್ಯವ್ಯಾಪಿ ಆನ್‌ಲೈನ್ ಕಲಿಕಾ ಮಟ್ಟವನ್ನು ಅರಿಯುವ ಅಭಿಯಾನದಲ್ಲಿ ಯಶಸ್ವಿಯಾಗಿದೆ. ಈ ಅಭಿಯಾನದ ಮುಂದುವರಿದ ಭಾಗವಾಗಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ೧೫೦ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾವಿನ್ ಆ್ಯಪ್‌ ಅನ್ನು ಉಚಿತವಾಗಿ ನೀಡುವ ಯೋಜನೆ ರೂಪಿಸಿದ್ದು, ಈಗಾಗಲೇ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಶಾಲೆಗಳನ್ನು ಆಯ್ಕೆ ಮಾಡಿದ್ದು, ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಮೊ.ಸಂ.೯೮೪೫೨೧೯೩೩೩ ಸಂಪರ್ಕಿಸಬಹುದು ಎಂದು ತಿಳಿಸಿದರು.syllabus-SSLC-students-Education-App-classes-Introduction-App-Founder-K.V.Prakash

ಚಿತ್ರಗಳ ಸರಳೀಕೃತ ವಿಡಿಯೋ, ಪರೀಕ್ಷಾ ಪೂರ್ವ ತಯಾರಿ ಪ್ರಶ್ನಾ ಪತ್ರಿಕೆ, ಉತ್ತರ ಪತ್ರಿಕೆಗಳ ಗುಚ್ಛ ಆ್ಯಪ್‌

ಸಹ ಸಂಸ್ಥಾಪಕರಾದ ಲತಾ ಪ್ರಕಾಶ್ ಆ್ಯಪ್ ಕುರಿತು ಮಾತನಾಡಿ, ಪ್ರತಿ ವಿಷಯದಲ್ಲೂ ೧೦೦ಕ್ಕೂ ಹೆಚ್ಚು ವಿಷಯಾಧಾರಿತ ವೀಡಿಯೋ ಪಾಠಗಳು, ಬಹು ಆಯ್ಕೆಯ ಪ್ರಶ್ನೆಗಳು (ಎಂಸಿಕ್ಯೂ), ಪ್ರಶ್ನೆ ಮತ್ತು ಉತ್ತರಗಳು, ಶೀಘ್ರ ಪುನರ್ಮನನ, ಜೀವಂತ ವೈಜ್ಞಾನಿಕ ಪ್ರಯೋಗಗಳು, ರೇಖಾಚಿತ್ರಗಳು ಮತ್ತು ವೈಜ್ಞಾನಿಕ ಚಿತ್ರಗಳ ಸರಳೀಕೃತ ವಿಡಿಯೋ ಚಿತ್ರಣಗಳು, ಪರೀಕ್ಷಾ ಪೂರ್ವ ತಯಾರಿ ಪ್ರಶ್ನಾ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಗುಚ್ಛ ಆ್ಯಪ್‌ನ ವಿಶೇಷತೆಗಳಾಗಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹ ಸಂಸ್ಥಾಪಕ ವಿ.ಎಸ್.ಅರುಣ್ ಇತರರು ಉಪಸ್ಥಿತರಿದ್ದರು.

key words : syllabus-SSLC-students-Education-App-classes-Introduction-
App-Founder-K.V.Prakash