ಹೆಚ್ ಸಿಜಿ ಫೌಂಡೇಶನ್ ಆಶ್ರಯದಲ್ಲಿ ಮೈಸೂರಿನಲ್ಲಿ ಸ್ವಸ್ತಿ ಕಲಾ ಪ್ರದರ್ಶನ: ವಿವಿಧ ದೇಶದ ಕಲಾವಿದರು ಭಾಗಿ…

ಮೈಸೂರು,ಫೆ,23,2020(www.justkannada.in): ಸ್ವಸ್ತಿಯು ಮೈಸೂರಿನ ಹೆಚ್ ಸಿಜಿ ಫೌಂಡೇಶನ್ ಆಶ್ರಯದಲ್ಲಿ ತನ್ನ ಏಳನೇ ಆವೃತ್ತಿಯ ಕಲಾ ಪ್ರದರ್ಶನ ಮತ್ತು ಮಾರಾಟವನ್ನ ಆಯೋಜಿಸಿದೆ.

ಮೈಸೂರಿನ ಹೆಚ್ ಸಿಜಿ ಆಸ್ಪತ್ರೆ ಆವರಣದಲ್ಲಿ ಇದೇ ಫೆಬ್ರವರಿ 16ರಿಂದ ಈ ಕಲಾಪ್ರದರ್ಶನ ಮತ್ತು ಮಾರಾಟ ಆರಂಭಿಸಲಾಗಿದ್ದು, ಫೆಬ್ರವರಿ26 ವರೆಗೂ ಇದು ನಡೆಯಲಿದೆ. ಫ್ರಾನ್ಸ್, ಲೆಬನಾನ್,  ಕಜಕಿಸ್ತಾನ್,  ರೊಮೇನಿಯಾ, ಸ್ವಿಡ್ಜರ್ ಲ್ಯಾಂಡ್, ಯುಎಸ್ ಎ  ಹಾಗೂ ಭಾರತೀಯ ವಿವಿಧ ಕಲಾವಿದರು ಪಾಲ್ಗೊಂಡಿದ್ದಾರೆ. ವಿವಿಧ ಕಲಾವಿಷಯಗಳ  ಮೇಲೆ ಕಲಾ ಕುಂಚದಲ್ಲಿ ಕಲಾಕೃತಿಗಳನ್ನ ಕಲಾವಿದರು ರಚಿಸುತ್ತಿದ್ದಾರೆ. ಇನ್ನು ಇವರು ರಚಿಸಿರುವ ಕಲಾಕೃತಿಗಳನ್ನ ಮಾರಾಟ ಮಾಡಲಾಗುತ್ತದೆ.

ಕಲಾ ಶಿಬಿರದ ನಂತರ ಕಲಾಪ್ರದರ್ಶನದಲ್ಲಿ ಕಲಾಕೃತಿಗಳನ್ನ  ಮಾರಾಟ ಮಾಡಲಾಗುತ್ತದೆ. ಮಾರಾಟವಾದ ಕೃತಿಗಳಿಂದ ಬಂದ ಆದಾಯವನ್ನ ಕ್ಯಾನ್ಸರ್  ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ.  ಅಸಹಾಯಕ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿಯೇ ಬೆಂಗಳೂರಿನ ಐಬಿಸ್ ಹೋಟೆಲ್ ನಲ್ಲಿ ಫೆಬ್ರವರಿ 26ರರಂದು ಕಲಾಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.

ಸ್ವಸ್ತಿ ಹೆಚ್ ಸಿಜಿಯ ಸೃಜನ ಶೀಲ ಆರೈಕೆ ಕೇಂದ್ರವಾಗಿದ್ದು ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ಸ್ವಸ್ತಿ ಕಲಾ ಪ್ರದರ್ಶನ ಮತ್ತು ಶಿಬಿರ ಆಯೋಜಿಸಿ ಎಲ್ಲಾ ವಿಧವಾದ ಕಲಾವಿದರಿಗೆ  ವೇದಿಕೆ ಒದಗಿಸಿಕೊಟ್ಟಿದೆ. ಹೆಚ್ ಸಿಜಿ ಫೌಂಡೇಶನ್ ಈಗಾಗಲೇ ಭಾರತದಾದ್ಯಂತ 3500 ಕ್ಯಾನ್ಸರ್ ಸಂತ್ರಸ್ತರಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆ  ನೀಡಿದೆ.

Key words: Swasti art exhibition -Mysore – HCG Foundation