ಸ್ವಾಮಿ ವಿವೇಕಾನಂದರ ಜೀವನ, ಸಾಧನೆ ಸ್ಮರಿಸಿದ ಶಾಸಕ ಎಸ್.ಎ ರಾಮದಾಸ್…

ಮೈಸೂರು,ಜನವರಿ,12,2021(www.justkannada.in): ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನೋತ್ಸವದ ಅಂಗವಾಗಿ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಿವೇಕಾನಂದ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆಗೆ  ಶಾಸಕ ಎಸ್.ಎ ರಾಮದಾಸ್ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಿದರು.jk-logo-justkannada-mysore

ಬಳಿಕ ಮಾತನಾಡಿದ ಅವರು, ಮನುಷ್ಯನ ಮೌಲ್ಯವನ್ನು ತಿಳಿಸಿದ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಣೆ ಮಾಡುತ್ತೇವೆ. ದೇಶದಾದ್ಯಂತ ಅಲ್ಲದೆ ಪ್ರಪಂಚದ ಬೇರೆ ಬೇರೆ ಕಡೆಯಲ್ಲಿ ಸಂಚಾರ ಮಾಡಿ ಭಾರತೀಯತೆಯ ವಿಚಾರವನ್ನು ಜನ ಮಾನಸಕ್ಕೆ ಕೊಟ್ಟವರು ವಿವೇಕಾನಂದರು.

ವಿವೇಕಾನಂದರು ಕೇವಲ 32ನೇ ವಯಸ್ಸಿನಲ್ಲಿ ವಿಶ್ವಕ್ಕೆ ಭಾರತದ ತಾಕತ್ತು ತಿಳಿಸಿಕೊಟ್ಟವರು, ವಿವೇಕಾನಂದರ ಜೀವನ ನಮ್ಮ ಯುವ ಜನತೆಗೆ ಸ್ಫೂರ್ತಿ. ಸ್ವಾಮಿ ವಿವೇಕಾನಂದರ ಮತ್ತು ಮೈಸೂರಿನ ನಂಟು ಕೂಡಾ ಹಾಗೇ ಇದೆ. ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾದ ರಾಜಮಹಾರಾಜರುಗಳಲ್ಲಿ ನಮ್ಮ ಮೈಸೂರು ಒಡೆಯರು ಕೂಡ ಒಬ್ಬರು. ಅವರೂ ಕೂಡ ಸ್ವಾಮೀಜಿಗಳ ಬುದ್ದಿಮತ್ತೆಯನ್ನು ಕಂಡು ಪ್ರಭಾವಿತರಾಗಿ ಅವರನ್ನು ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಲು ಬಲವಂತ ಪಡಿಸಿ ಅದರ ಖರ್ಚುವೆಚ್ಚಗಳನ್ನು ಭರಿಸಲು ಮುಂದಾಗುತ್ತಾರೆ ಎಂದು ಸ್ಮರಿಸಿದರು.swami-vivekananda-jayanthi-life-achievement-mysore-mla-sa-ramdas

ರಾಮಕೃಷ್ಣಾಶ್ರಮದ ಸ್ವಾಮೀಜಿ ಮಾತನಾಡಿ, ಗಾಂಧೀಜಿಯಂತವರು ಕೂಡಾ ಸ್ವಾಮಿ ವಿವೇಕಾನಂದರ ಜೀವನ ಕೃತಿಯನ್ನು ಓದಿದ ಮೇಲೆ ನನಗೆ ದೇಶಭಕ್ತಿ ಸಹಸ್ರಮಡಿ  ಹೆಚ್ಚಾಯಿತು ಎಂದು ಹೇಳಿದ್ದರು. ಸ್ವಾಮಿ ವಿವೇಕಾನಂದರು ಕೊಟ್ಟ ಮೌಲ್ಯ ಗಳು ನಮ್ಮಲ್ಲಿವೆ ಅದರಲ್ಲಿ ನಡೆಯುವಂತಹ ಕೆಲಸವಾಗಬೇಕು ಎಂದು ಮಾತನಾಡಿದರು

ಕಾರ್ಯಕ್ರಮದಲ್ಲಿ ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷ ಎಂ.ವಡಿವೆಲು, ಪ್ರಧಾನಕಾರ್ಯದರ್ಶಿ ಓಂ.ಶ್ರೀನಿವಾಸ್, ಕೇಬಲ್ ನಾಗೇಂದ್ರ, ಸ್ಥಳೀಯ ನಗರಪಾಲಿಕಾ ಸದಸ್ಯರುಗಳಾದ ಸುನಂದಾ ಪಾಲನೇತ್ರ, ಚಂಪಕಾ,ರೂಪ. ವಿವಿಧ ಪದಾಧಿಕಾರಿಗಳು ,ಕಾರ್ಯಕರ್ತರು, ಸ್ಥಳೀಯ ನಾಗರೀಕರು ಹಾಜರಿದ್ದರು.

Key words: Swami Vivekananda jayanthi- – life- achievement – mysore-MLA-SA Ramdas