ನಾಳೆ ಗ್ರಾ.ಪಂ ಅಧ್ಯಕ್ಷ ಚುನಾವಣೆ: ಇಂದು ಗ್ರಾ.ಪಂ ಸದಸ್ಯ ಅನುಮಾನಸ್ಪದ ಸಾವು.

Promotion

ಮೈಸೂರು,ಜು,26,2022(www.justkannada.in): ಗ್ರಾಮ ಪಂಚಾಯತಿ ಸದಸ್ಯನೋರ್ವ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಆರ್‌.ಟಿ.ನಗರದ ಸುಭೀಕ್ಷಾ ಗಾರ್ಡನ್ಸ್ ನಲ್ಲಿ ಈ ಘಟನೆ ನಡೆದಿದೆ. ಕೆಆರ್ ನಗರ ತಾಲ್ಲೂಕಿನ ಹಳಿಯೂರು ಗ್ರಾ.ಪಂ ಸದಸ್ಯ ಸತೀಶ್ (34) ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಸತೀಶ್ ಅವರು ಜವರೇಗೌಡ ಕೊಪ್ಪಲಿನ ನಿವಾಸಿಯಾಗಿದ್ದಾರೆ. ತಂಗಿದ್ದ ಹೊಟೆಲ್ ನಲ್ಲಿ ಮೈಮೇಲಿನ ಒಂದು ನೂಲು ಬಟ್ಟೆ ಇಲ್ಲದೆ ಸತೀಶ್ ಮೃತದೇಹ ಬಿದ್ದಿತ್ತು.

ನಾಳೆ ಹಳೆಯೂರು ಗ್ರಾ.ಪಂ ಅಧ್ಯಕ್ಷರ ಚುನಾವಣೆ ನಡೆಯಬೇಕಾಗಿತ್ತು.  ಗ್ರಾ.ಪಂ ಅಧ್ಯಕ್ಷರ ಚುನಾವಣೆ ಹಿನ್ನೆಲೆ,  11ಕ್ಕೂ ಹೆಚ್ಚು ಸದಸ್ಯರು ರೆಸಾರ್ಟ್‌ಗೆ ಬಂದು ತಂಗಿದ್ದರು. ಸತೀಶ್ ಕಾಂಗ್ರೆಸ್ ಪಕ್ಷ ಬೆಂಬಲದಿಂದ ಗೆದ್ದಿದ್ದರು. ಈ ಮಧ್ಯೆ ಜೆಡಿಎಸ್‌ನಿಂದ ಗೆದ್ದಿದ್ದ ದಿನೇಶ್ ಅಧ್ಯಕ್ಷರಾಗಲು ಪ್ರವಾಸ ಕಳುಹಿಸಿದ್ದರು. ಕಳೆದ 20 ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಗ್ರಾ.ಪಂ ಸದಸ್ಯರು ಪ್ರವಾಸ ಹೋಗಿದ್ದರು. ಇದೀಗ ಸುಭೀಕ್ಷಾ ಗಾರ್ಡನ್ಸ್ ಸತೀಶ್ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Suspicious -death – Gram Panchayat -member –today-mysore