ಇಂಟರ್’ನೆಟ್’ನಲ್ಲಿ ಸದ್ಯ ಸುಶ್ಮಿತಾ ಸೇನ್ -ಲಲಿತ್ ಮೋದಿ ಡೇಟಿಂಗ್ ವಿಷಯವೇ ಹಾಟ್ ಟಾಪಿಕ್ !

Promotion

ಬೆಂಗಳೂರು, ಜುಲೈ 15, 2022 (www.justkannada.in): ಮಾಜಿ ವಿಶ್ವಸುಂದರಿ, ನಟಿ ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿ ಡೇಟಿಂಗ್ ವಿಷಯ ಸದ್ಯದ ಹಾಟ್​ ಟಾಪಿಕ್ ಆಗಿದೆ!

ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿ ಡೇಟಿಂಗ್ ನಡೆಸುತ್ತಿರುವ ವಿಷಯ ಬಹಿರಂಗವಾಗಿದೆ. ನೆನ್ನೆ ಟ್ವೀಟ್ಟರ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ಈ ಇಬ್ಬರು ಈ ವಿಷಯವನ್ನು ಸ್ವತಃ ಘೋಷಿಸಿಕೊಂಡಿದ್ದಾರೆ.

ಲಲಿತ್ ಮೋದಿ ಮತ್ತು ಸುಶ್ಮಿತಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

9 ವರ್ಷಗಳ ಹಿಂದಿನ ಟ್ವೀಟ್​ ಒಂದು ವೈರಲ್ ಆಗಿದ್ದು, ಸುಮಾರು 9 ವರ್ಷಗಳ ಮೊದಲೇ ಇವರಿಬ್ಬರ ನಡುವೆ ಸಂಬಂಧ ಪ್ರಾರಂಭವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಲಲಿತ್ ಅವರು ಸುಶ್ಮಿತಾ ಅವರನ್ನು ಟ್ಯಾಗ್ ಮಾಡಿ ‘ನನ್ನ SMS ಗೆ ಉತ್ತರಿಸಿ’ ಎಂದು ಬರೆದಿದ್ದಾರೆ.