ಪರಿಸರ ಸಮತೋಲನಕ್ಕೆ ಉರಗ ಸಂತತಿಯ ಉಳಿವು ಮುಖ್ಯ-ಉರಗ ತಜ್ಞ ಸ್ನೇಕ್ ಶಾಮ್.

ಮೈಸೂರು,ಜುಲೈ,17,2021(www.justkannada.in): ಪರಿಸರ ಸಮತೋಲನಕ್ಕೆ ಉರಗ ಸಂತತಿಯ ಉಳಿವು ಮುಖ್ಯ  ಎಂದು ಉರಗ ತಜ್ಞ ಸ್ನೇಕ್ ಶಾಮ್ ನುಡಿದರು. jk

ವಿಶ್ವ ಹಾವುಗಳ ದಿನಾಚರಣೆ ಅಂಗವಾಗಿ  85000 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಸಂರಕ್ಷಿಸಿದ ಉರುಗ ತಜ್ಞ ಸ್ನೇಕ್ ಶಾಮ್  ಅವರಿಗೆ ಮೈಸೂರು ಯುವ ಬಳಗದ ವತಿಯಿಂದ ದಿವಾನ್ಸ್ ರಸ್ತೆಯಲ್ಲಿರುವ ಗ್ರೀನ್ ಹೆರಿಟೇಜ್ ಹೋಟೆಲ್ ನಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು

ಸನ್ಮಾನ ಸ್ವೀಕರಿಸಿ ಮಾತನಾಡಿದ ಉರಗತಜ್ಞ ಸ್ನೇಕ್ ಶ್ಯಾಮ್, ಪರಿಸರ ಸಮತೋಲನಕ್ಕೆ ಉರಗ ಸಂತತಿಯ ಉಳಿವು ಮುಖ್ಯ ,ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಉಪಯುಕ್ತ ಸ್ಥಳದಲ್ಲಿಯೇ ಗಿಡಗಳನ್ನು ನೆಟ್ಟು ಬೆಳೆಸಬೇಕು. ಆ ಮೂಲಕ ಪರಿಸರವನ್ನು ಶುದ್ಧವಾಗಿಸುವ ಅಲ್ಪ ಸೇವೆಯನ್ನು ಮಾಡಿದಂತಾಗುತ್ತದೆ. ಪರಿಸರದಲ್ಲಿರುವ ಪ್ರತಿಯೊಂದು ಜೀವಿಯೂ ಒಂದನ್ನೊಂದು ಅವಲಂಬಿಸಿಯೇ ಬದುಕುವ ಕಾರಣ ಪ್ರತಿಯೊಂದಕ್ಕೂ ಪ್ರಾಮುಖ್ಯತೆಯಿದೆ. ಎಲ್ಲವನ್ನೂ ಗೌರವಿಸಿ ಎಂದು ಹೇಳಿದ ಅವರು, ಉರಗಗಳ ಬಗೆಗೆ ವಿಶೇಷ ಮಾಹಿತಿಯನ್ನು ನೀಡಿದರು. ಉರಗ ಪ್ರಭೇದಗಳು, ಅವುಗಳ ಸಂತತಿ, ಹಾವಿನ ಕಡಿತದ ಬಳಿಕ ನಡೆಸುವ ಪ್ರಥಮ ಚಿಕಿತ್ಸೆಗಳ ಕುರಿತು ಸಚಿತ್ರ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಆರ್ ಪರಮೇಶ ಗೌಡ, ಯುವ ಮುಖಂಡರಾದ ವಿಕ್ರಮ್ ಅಯ್ಯಂಗಾರ್ ಕನಿಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಸಂದೀಪ್, ಮೈಸೂರು ಯುವ ಬಳಗದ ನವೀನ್, ಮಂಜುನಾಥ್, ಲೋಹಿತ್, ವಿಜ್ಞೇಶ್ವರ ಭಟ್, ಸನತ್, ಹಾಗೂ ಇನ್ನಿತರರು ಹಾಜರಿದ್ದರು.

Key words: survival -reptile -species is –important- environmental balance-mysore-Snake Sham