ನೋಟ್ ಬ್ಯಾನ್ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂಕೋರ್ಟ್.

ನವದೆಹಲಿ,ಜನವರಿ,2,2023(www.justkannada.in): 2016ರಲ್ಲಿ 1000 ರೂ. ಮತ್ತು 500 ರೂ. ಮುಖಬೆಲೆಯ ನೋಟು  ನಿಷೇಧಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.

2016ರ ನವೆಂಬರ್ ತಿಂಗಳಲ್ಲಿ  ಪ್ರಧಾನಿ ಮೋದಿ ಸರ್ಕಾರದ ನೋಟು ಅಮಾನ್ಯೀಕರಣದ ಕಾನೂನು ಸಿಂಧುತ್ವವನ್ನು ಪ್ರಶ್ನಿಸಿ 58 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್‌ ನ ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠವು ಇಂದು ಪ್ರಕರಣದಲ್ಲಿ ತನ್ನ ತೀರ್ಪನ್ನು ಪ್ರಕಟಿಸಿದೆ.

ನೋಟ್ ಬ್ಯಾನ್ ಸಿಂಧುತ್ವ ಎತ್ತಿ ಹಿಡಿದಿರುವ  ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ, ಕೇಂಧ್ರ ಸರ್ಕಾರದ ಕ್ರಮದಲ್ಲಿ ಹಸ್ತಕ್ಷೇಪಕ್ಕೆ ನಿರಾಕರಿಸಿದೆ. ನೋಟು ಅಮಾನ್ಯೀಕರಣದ ವೇಳೆ ಕೇಂದ್ರ ಸರ್ಕಾರ ಆರ್ ಬಿಐ ಸಮಾಲೋಚಿಸಿದ್ದವು. ಇಂತಹ ವಿಚಾರಗಳಲ್ಲಿ ಸುಪ್ರೀಕೋರ್ಟ್ ಮಧ್ಯಪ್ರವೇಶಿಸಲ್ಲ. ನೋಟ್  ಬದಲಾಯಿಸಲು ನೀಡಿದ್ದ ಕಾಲಾವಕಾಶ ಸರಿಯಾಗಿದೆ ಎಂದು ಹೇಳಿದೆ.

Key words: Supreme Court -upheld – validity -note ban.