ಅನರ್ಹತೆ ರದ್ದು ಕೋರಿದ್ದ ಪ್ರಕರಣಕ್ಕೆ ಟ್ವಿಸ್ಟ್: ಅನರ್ಹ ಶಾಸಕರ ಪರ ವಾದ ಸಮರ್ಥಿಸಿಕೊಂಡ ಹಾಲಿ ಸ್ಪೀಕರ್ ಪರ ವಕೀಲ ತುಷಾರ್ ಮೆಹ್ತಾ…

kannada t-shirts

ನವದೆಹಲಿ,ಸೆ,25,2019(www.justkannada.in): ಸ್ಪೀಕರ್ ನಿರ್ಧಾರ ಪ್ರಶ್ನಿಸಿ17 ಮಂದಿ ಅನರ್ಹ ಶಾಸಕರು  ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಜುಲೈನಲ್ಲಿ ಅನರ್ಹ ಶಾಸಕರ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಸ್ಪೀಕರ್ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದಿಸಿದ್ದರು. ಈಗ ಸ್ಪೀಕರ್ ಪರ ವಕೀಲರು ಬದಲಾಗಿದ್ದು ಹಿರಿಯ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ.

ಈ ನಡುವೆ ಸ್ಪೀಕರ್ ಪರ ವಕೀಲ ತುಷಾರ್ ಮೆಹ್ತಾ ಅವರು ಅನರ್ಹ ಶಾಸಕರ ವಾದವನ್ನೇ ಸಮರ್ಥಿಸಿಕೊಂಡಿದ್ದು,  ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ನಿಲುವನ್ನ ವಿರೋಧಿಸಿದ್ದಾರೆ.

ಈಗ ಸ್ಪೀಕರ್ ಕಚೇರಿ ಪರ ವಕೀಲರಾಗಿ ವಾದ ಮಂಡಿಸುತ್ತಿರುವ ತುಷಾರ್ ಮೆಹ್ತಾ ಅವರು, ಅನರ್ಹ ಶಾಸಕರ ವಾದವನ್ನೇ ಬೆಂಬಲಿಸಿ ಪ್ರತಿವಾದ ಮಂಡಿಸಿರುವುದು ಪ್ರಕರಣದ ವಿಚಾರಣೆಗೆ ತಿರುವು ಪಡೆದುಕೊಂಡಿದೆ. ಜುಲೈ ತಿಂಗಳಿನಲ್ಲಿ ಸ್ಪೀಕರ್  ಪರ ವಕೀಲರಾಗಿ ವಾದ ಮಂಡಿಸಿದ್ದ ಅಭಿಷೇಕ್ ಮನು ಸಿಂಘ್ವಿ ಅನರ್ಹ ಶಾಸಕರ ನಿಲುವನ್ನು ವಿರೋಧಿಸಿದ್ದರು. ಈಗ ತುಷಾರ್ ಮೆಹ್ತಾ ಅವರು ಅನರ್ಹ ಶಾಸಕರ ವಾದವನ್ನೇ ಬೆಂಬಲಿಸಿ ವಾದ ಮಂಡಿಸಿದ್ದಾರೆ

ಶಾಸಕರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದರೆ ಮೊದಲು ರಾಜೀನಾಮೆ ಬಗ್ಗೆ ನಿರ್ಧರಿಸಬೇಕು. ಹಿಂದಿನ ಸ್ಪೀಕರ್ ಮಾಡಿದ್ದು ತಪ್ಪು. ಶಾಸಕರ ರಾಜೀನಾಮೆ ಬಗ್ಗೆಯೂ ಅಥವಾ ಅನರ್ಹತೆ ಬಗ್ಗೆ ಯಾವುದರ ಮೊದಲು ನಿರ್ಧರಿಸಬೇಕೆಂಬುದನ್ನ ಸುಪ್ರೀಂಕೋರ್ಟ್ ಗೈಡ್ ಲೈನ್ ಮಾಡಬೇಕು ಎಂದು ಸ್ಪೀಕರ್ ಪರ ವಕೀಲ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ.

Key words: supreme court-Twist –disqualified  MLA-case-speaker- Advocate -Tushar Mehta- defends

website developers in mysore