ಅನರ್ಹ ಶಾಸಕರ ಅರ್ಜಿ ವಿಚಾರಣೆ ಕೆಲ ಕಾಲ ಮುಂದೂಡಿದ ಸುಪ್ರೀಂಕೋರ್ಟ್…

kannada t-shirts

ನವದೆಹಲಿ,ಸೆ,23,2019(www.justkannada.in):  ಅನರ್ಹತೆ ಆದೇಶ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನ ಸುಪ್ರೀಂಕೋರ್ಟ್ ಕೆಲ ಕಾಲ ಮುಂದೂಡಿದೆ.

ಅನರ್ಹ ಶಾಸಕರ ಅರ್ಜಿ ವಿಚಾರಣೆ ಇಂದು ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಪರ ವಕೀಲರು ಇನ್ನು ಹಾಜರಾಗದ ಹಿನ್ನೆಲೆ ವಿಚಾರಣೆಯನ್ನ ಕೆಲ ಕಾಲ ಮುಂದೂಡಿದೆ.  ಬೇರೆ ಅರ್ಜಿಗಳ ವಿಚಾರಣೆ ನಂತರ ಅನರ್ಹ ಶಾಸಕರ ಅರ್ಜಿಯನ್ನ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ.

ಅನರ್ಹ ಶಾಸಕರ ಪರ ವಾದ ಮಂಡಿಸುತ್ತಿರುವ ವಕೀಲ ಮುಕುಲ್ ರೋಹ್ಟಗಿ, ಸುಪ್ರೀಂಕೋರ್ಟ್ ಸೂಚನೆಯಂತೆ ರಾಜೀನಾಮೆ ಬಗ್ಗೆ ತೀರ್ಮಾನಿಸಿಲ್ಲ. ಸ್ಪೀಕರ್ ರಾಜೀನಾಮೆ ಸ್ವೀಕರಿಸದೆ ಏಕಾಏಕಿ ಅನರ್ಹಗೊಳಿಸಿದ್ದಾರೆ. ಈ ಮಧ್ಯೆ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದರಿಂದ ತುರ್ತಿ ಆದೇಶ ಅಗತ್ಯವಿದೆ ಎಂದು ಕೋರ್ಟ್ ಗೆ ಮನವಿ ಮಾಡಿದರು.

ತುರ್ತು ವಿಚಾರಣೆ ಬಗ್ಗೆ ಗಮನಿಸುತ್ತೇವೆ ಎಂದು ತ್ರಿಸದಸ್ಯ ಪೀಠ ಹೇಳಿದೆ ಎನ್ನಲಾಗಿದ್ದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಹಾಜರಾಗದ ಹಿನ್ನೆಲೆ ಒಂದು ಗಂಟೆ ವಿಚಾರಣೆಯನ್ನ ಮುಂದೂಡಿದೆ.

Key words: Supreme Court- postpones- hearing –disqualified MLA- petition

website developers in mysore