ಜ್ಞಾನವಾಪಿ ಮಸೀದಿ ಸರ್ವೆ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ:

ನವದೆಹಲಿ,ಮೇ,2022(www.justkannada.in):  ಜ್ಞಾನವಾಪಿ ಮಸೀದಿ ಸರ್ವೆ ವರದಿಯನ್ನ ವಾರಣಾಸಿ ಕೋರ್ಟ್ ಗೆ ಸಲ್ಲಿಕೆಯಾದ ಬೆನ್ನಲ್ಲೆ  ಸರ್ವೆ ಬಗ್ಗೆ  ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ಇಂದು ವಾರಣಾಸಿಯ ಸಿವಿಲ್ ಕೋರ್ಟ್ ಗೆ ಮೇ.14ರಿಂದ 16ರವರೆಗೆ ಜ್ಞಾನವಾಪಿ ಮಸೀದಿಯ ವೀಡಿಯೋ ಸರ್ವೆ ಕಾರ್ಯ ನಡೆಸಿದ್ದ ಸುಮಾರು 12 ಪುಟಗಳ ವರದಿಯನ್ನು ಸಲ್ಲಿಸಲಾಯಿತು. ಈ ನಡುವೆ ಜ್ಞಾನವಾಪಿ ಮಸೀದಿ ಸರ್ವೆ ವಿಚಾರಣೆಗೆ ತಡೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಮಸೀದಿ ಆಡಳಿತ ಮಂಡಳಿ ಮೇಲ್ಮನವಿ ಸಲ್ಲಿಸಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್  ಸರ್ವೆ ಬಗ್ಗೆ ವಿಚಾರಣೆ ತಡೆ ನೀಡಿದ್ದು, ಸುಪ್ರೀಂಕೋರ್ಟ್ ನಲ್ಲಿರುವ ಅರ್ಜಿ ಇತ್ಯರ್ಥವಾಗಲಿ. ಅರ್ಜಿ ಇತ್ಯಾರ್ಥ ಆದ ಬಳಿಕ ವಿಚಾರಣೆ ನಡೆಸಿ ಎಂದು ವಾರಣಾಸಿ ಕೋರ್ಟ್ ಗೆ ಸೂಚನೆ ನೀಡಿ ವಿಚಾರಣೆಯನ್ನ ನಾಳೆಗೆ ಮುಂದೂಡಿದೆ.

Key words: Supreme Court –jnanavapi-Mosque – Survey – Court.