ಪತ್ರಕರ್ತ ಅರ್ನಬ್ ಗೋಸ್ವಾಮಿಗೆ ಜಾಮೀನು ಮಂಜೂರು ಮಾಡಿದ ಸುಪ್ರಿಂಕೋರ್ಟ್…

ನವದೆಹಲಿ,ನವೆಂಬರ್,11,2020(www.justkannada.in): ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.kannada-journalist-media-fourth-estate-under-loss


ಪ್ರಕರಣ ಸಂಬಂಧ ಬಂಧಿತರಾಗಿದ್ದ ಪತ್ರಕರ್ತ ಅರ್ನಬ್ ಗೋಸ್ವಾಮಿ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.  ಆದರೆ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ ಅವರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಜಾಮೀನು ನೀಡಲು ನಿರಾಕರಿಸಿದ ಹಿನ್ನೆಲೆ ಸುಪ್ರೀಂ ಕೋರ್ಟ್ ಗೆ ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಿದ್ದರು.supreme-court-granted-bail-journalist-arnab-goswami

ಇದೀಗ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು ರಿಪಬ್ಲಿಕ್ ಟಿವಿ ಎಡಿಟರ್ ಅರ್ನಬ್ ಗೋಸ್ವಾಮಿಯವಿಗೆ ಜಾಮೀನು  ಮಂಜೂರು ಮಾಡಿದೆ. ಈ ಮೂಲಕ 2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರ ಕಾಲ ಕಸ್ಟಡಿಯಲ್ಲಿರುವ ಅರ್ನಬ್ ಗೋಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್ ಭಾರಿ ರಿಲೀಫ್ ನೀಡಿದೆ.

English summary…

SC grants bail to journalist Arnab
New Delhi, Nov. 11, 2020 (www.justkannada.in): The Hon’ble Supreme Court has granted bail to journalist Arnab Goswami, who was recently arrested for allegedly involving in a suicide case.
Arnab had submitted an application seeking bail at the Bombay High Court, but the HC had reject his plea. Hence, he had appealed before the Supreme Court.
Arnab has been taken into custody by the Maharshtra Police for a week for his alleged involvement in interior designer Anvay Nayak’s suicide case, that happened in the year 2018.

Key words: Supreme Court- granted -bail – journalist -Arnab Goswami.