ಬಳ್ಳಾರಿಗೆ ತೆರಳಲು  ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಅನುಮತಿ…

kannada t-shirts

ನವದೆಹಲಿ, ಜೂ,7,2019(www.justkannada.in):  ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ  ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್  ಅನುಮತಿ ನೀಡಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ವೇಳೆ ಬಳ್ಳಾರಿಗೆ ತೆರಳದಂತೆ  ನಿರ್ಬಂಧ ಹೇರಿತ್ತು. ಹೀಗಾಗಿ ಬಳ್ಳಾರಿಗೆ ತೆರಳಲು ಅನುಮತಿ ಕೋರಿ ಜನಾರ್ದನರೆಡ್ಡಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನ ಮಾನ್ಯ ಮಾಡಿರುವ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇತೃತ್ವದ ರಜಾಕಾಲದ ನ್ಯಾಯಪೀಠ ಎರಡು ವಾರ ಬಳ್ಳಾರಿಗೆ ತೆರಳಲು ಶುಕ್ರವಾರ ಅನುಮತಿ ನೀಡಿದೆ. ಜೂನ್ 8 ರಿಂದ ಎರಡು ವಾರ ಕಾಲ ಅವರು ಬಳ್ಳಾರಿಯಲ್ಲಿ ಇರಬಹುದು. ಆದರೆ, ಈ ಭೇಟಿ ವೇಳೆ ತಮ್ಮ ವಿರುದ್ಧ ಸಾಕ್ಷ್ಯಗಳ ನಾಶಪಡಿಸುವ ಪ್ರಯತ್ನ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸದಂತೆ ಷರತ್ತು ವಿಧಿಸಲಾಗಿದೆ.

ತಮ್ಮ ಮಾವ ಪರಮೇಶ್ವರ್ ರೆಡ್ಡಿ ಪಾರ್ಶ್ವವಾಯುವಿಗೆ ತುತ್ತಾಗಿದ್ದು ಈ ಹಿನ್ನೆಲೆ ಅವರನ್ನು ನೋಡಲು ಬಳ್ಳಾರಿಗೆ ತೆರಳಲು ಅವಕಾಶ ನೀಡಬೇಕು ಎಂದು ಕೋರಿದ್ದರು.

Keywords: Supreme Court approves former minister Janardhana Reddy to go to Bellary

#SupremeCourt #approves #JanardhanaReddy #Bellary

website developers in mysore