ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಫೆ.13ರ ಬಂದ್ ಗೆ ವಿವಿಧ ಸಂಘಟನೆಗಳ ಬೆಂಬಲ- ಕನ್ನಡ ಒಕ್ಕೂಟ ಸಂಘಟನೆಗಳ ಅಧ್ಯಕ್ಷ  ಹೆಚ್.ಬಿ ನಾಗೇಶ್ ಹೇಳಿಕೆ…

kannada t-shirts

ಬೆಂಗಳೂರು,ಫೆ,11,2020(www.justkannada.in): ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಫೆಬ್ರವರಿ 13 ರಂದು ಕನ್ನಡಪರ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಲಾಗಿದೆ. ಬಂದ್ ಗೆ 700 ಸಂಘಟನೆಗಳು ಬೆಂಬಲ ನೀಡಿವೆ ಎಂದು ಕನ್ನಡ ಒಕ್ಕೂಟ ಸಂಘಟನೆಗಳ ಅಧ್ಯಕ್ಷ  ಹೆಚ್.ಬಿ ನಾಗೇಶ್ ಹೇಳಿದರು.

ರಾಜ್ಯದಲ್ಲಿ ಕೂಡಲೇ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ  ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ, ಅನೇಕ ಕನ್ನಡ ಪರ ಸಂಘಟನೆಗಳು ಫೆ.13ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಬಿ ನಾಗೇಶ್,  ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ  ಫೆಬ್ರವರಿ 13 ರಂದು ಬಂದ್ ಗೆ ಕರೆ ನೀಡಲಾಗಿದೆ.  ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಷ್ಕರ ನಡೆಸಲಾಗುತ್ತದೆ. ಟೌನ್ ಹಾಲ್ ನಿಂದ ಪ್ರೀಡಂಪಾರ್ಕ್  ವರೆಗೆ ಮೆರವಣಿಗೆ  ಮಾಡಲಾಗುತ್ತದೆ. ಈ ಮೆರವಣಿಗೆಯಲ್ಲಿ 40 ಮಂದಿ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಬಂದ್ ದಿನ ಬೇರೆ ಜಿಲ್ಲೆಗಳಿಂದ 30 ಸಾವಿರ ಜನ ಬರ್ತಾರೆ  ಎಂದು ತಿಳಿಸಿದರು.

ನಟ ಶಿವರಾಜ್ ಕುಮಾರ್  ಅವರಿಗೆ 10 ಬಾರಿ  ಕರೆ ಮಾಡಿದ್ದೇನೆ. ಅವರು ಬರ್ತೀನಿ ಅಂತ ಹೇಳಿ ಬಂದಿಲ್ಲ. ಹೀಗಾಗಿ ನಾಳೆ ಅವರ ಮನೆಗೆ ಹೋಗಿ ಬೆಂಬಲ ನೀಡುವಂತೆ ಮನವಿ ಮಾಡುತ್ತೇವೆ ಎಂದು ಹೆಚ್.ವಿ ನಾಗೇಶ್ ತಿಳಿಸಿದರು.

ಸರೋಜಿನಿ ಮಹಿಷಿ  ವರದಿ ಜಾರಿಗಾಗಿ 100 ದಿನದಿಂದ ಹೋರಾಟ ಮಾಡಿದ್ದೇವೆ.  ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ನೀಡಿದ್ರೆ ಬಂದ್ ವಾಪಸ್ ಪಡೆಯುತ್ತೇವೆ ಎಂದು ನಾಗೇಶ್ ತಿಳಿಸಿದರು.

Key words: support -organizations -feb 13th bandh– implementation – Dr. Sarojini Mahishi Report.

 

website developers in mysore