ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ  ಎರಡು ಸಾವಿರ ಮೀ. ಉದ್ದದ ತ್ರಿವರ್ಣ ಧ್ವಜ ಹಿಡಿದು ಬೃಹತ್ ಮೆರವಣಿಗೆ….

Promotion

ಕಲಬುರಗಿ,ಜ,11,2020(www.justkannada.in):  ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ  ಕಲ್ಬುರ್ಗಿ ನಗರದಲ್ಲಿ ಎರಡು ಸಾವಿರ ಮೀ. ಉದ್ದದ ತ್ರಿವರ್ಣ ಧ್ವಜ ಹಿಡಿದು ಬೃಹತ್ ಮೆರವಣಿಗೆ ನಡೆಸಲಾಯಿತು.

ಕಲಬುರಗಿ ನಾಗರಿಕ ಸಮಿತಿ ವತಿಯಿಂದ ಬೃಹತ್ ತಿರಂಗ ಧ್ವಜದ ಮೆರವಣಿಗೆ ಆಯೋಜಿಸಿದ್ದು , ತಿರಂಗ ಧ್ವಜ ಎಲ್ಲೆಡೆ ರಾರಾಜಿಸುತ್ತಿದೆ. ನಗರದ ನಗರೇಶ್ವರ ಶಾಲೆಯಿಂದ  ಮೆರವಣಿಗೆ ಪ್ರಾರಂಭವಾಗಿದ್ದು ಮೆರವಣಿಗೆಯಲ್ಲಿ ವಿವಿಧ ಮಠಾಧೀಶರು, ಬಿಜೆಪಿ ಮುಖಂಡರು, ಸಾವಿರಾರು ಜನರು ಪಾಲ್ಗೊಂಡಿದ್ದಾರೆ.

ಸುಮಾರು ಎರಡು ಸಾವಿರ ಮೀಟರ್ ಉದ್ದದ ತ್ರಿವರ್ಣ ಧ್ವಜ ಹಿಡಿದು ಸಿಎಎ ಮತ್ತು ಕೇಂದ್ರದ ಪರ ಘೋಷಣೆ ಕೂಗುವ ಮೂಲಕ ಮೆರವಣಿಗೆಯಲ್ಲಿ ಸಾಗುತ್ತಿದ್ದಾರೆ.

Key words: support – Citizenship Amendment Act- Huge Jatha-holding –long- national flag.