ಒಂದು ವಾರದೊಳಗೆ ಇಲ್ಲಿನ ಬೇಡಿಕೆಯಷ್ಟು ರಸಗೊಬ್ಬರ ಪೂರೈಕೆ –ಮೈಸೂರಿನಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿಕೆ…  

ಮೈಸೂರು,ಅಕ್ಟೋಬರ್,16,2020(www.justkannada.in): ರಸಗೊಬ್ಬರ ಕೊರತೆ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೃಷಿ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಒಂದು ವಾರದೊಳಗೆ ಇಲ್ಲಿನ ಬೇಡಿಕೆಯಷ್ಟು ರಸಗೊಬ್ಬರ  ಸಿಗಲಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ಮೈಸೂರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಡಗೂಡಿ ಕೃಷಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ರಸಗೊಬ್ಬರ ಕೊರತೆ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗಾಗಲೇ 450 ಮೆಟ್ರಿಕ್ ಟನ್ ರಸಗೊಬ್ಬರ ಬಂದಿದೆ. ಒಂದು ವಾರದೊಳಗೆ ಇಲ್ಲಿನ ಬೇಡಿಕೆಯಷ್ಟು ರಸಗೊಬ್ಬರ  ಸಿಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಬಿ.ಸಿ ಪಾಟೀಲ್, ಬೆಳೆಹಾನಿಗೆ ಸಂಬಂಧಿಸಿದಂತೆ ಸರ್ವೆ ಕಾರ್ಯ ನಡೆಯುತ್ತಿದೆ. ಕಳೆದ ವರ್ಷ ಬೆಳೆಹಾನಿಗೆ ಇಂದು 36.57 ಕೋಟಿ ರುಪಾಯಿ ಹಣ ಬಿಡುಗಡೆ ಆಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ  800 ಕೋಟಿ ರೂ ಹಣ ಇದೆ. ಎಲ್ಲೆಲ್ಲಿ ಬೆಳೆ ಹಾನಿಯಾಗುತ್ತದೋ ಅಲ್ಲಿ ತಕ್ಷಣ ಸರ್ವೇ ಮಾಡಿಸಿ ಪರಿಹಾರ ನೀಡುವಂತೆ ಆದೇಶ ಮಾಡಲಾಗಿದೆ ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.supply-enough-fertilizer-one-week-mysore-agriculture-minister-bc-patil

ಇನ್ನು ಪರಿಹಾರ ನೀಡಲು ವಿಳಂಬ ಆಗುತ್ತಿಲ್ಲ. ಪರಿಹಾರಕ್ಕಾಗಿ ಸ್ಪಷ್ಟ ದಾಖಲಾತಿ ಕೊಡಬೇಕಾಗುತ್ತದೆ. ದಾಖಲಾತಿ ಪರಿಶೀಲಿಸಲು ಸಮಯ ಬೇಕಾಗುತ್ತೆ.  ಹೀಗಾಗಿ ವಿಳಂಬವಾಗುತ್ತೆ ಎಂದು ಬಿ.ಸಿ ಪಾಟೀಲ್ ತಿಳಿಸಿದರು.

Key words: Supply -enough -fertilizer – one week-mysore-Agriculture Minister -BC Patil