ಮಹಿಳೆಯರ ಐಪಿಎಲ್ ಲೀಗ್ ಆಯೋಜಿಸಿ ಎಂದ ಸುನಿಲ್ ಗವಾಸ್ಕರ್

ಮೆಲ್ಬೋರ್ನ್, ಮಾರ್ಚ್ 09, 2020 (www.justkannada.in): ಪುರುಷರ ಐಪಿಎಲ್ ಮಾದರಿಯಲ್ಲಿಯೇ ಮಹಿಳೆಯರ ಐಪಿಎಲ್ ಲೀಗ್ ಆಯೋಜಿಸಬೇಕು ಅಂತಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿಗೆ ಒತ್ತಾಯಿಸಿದ್ದಾರೆ.

2021ರಿಂದ ಮಹಿಳಾ ಐಪಿಎಲ್ ಟೂರ್ನಿಯನ್ನೂ ಆಯೋಜಿಸುವಂತೆ ಪ್ಲ್ಯಾನ್ ರೂಪಿಸುವಂತೆ ಸಲಹೆ ನೀಡಿದ್ದಾರೆ.
ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಈಗಾಗಲೇ ಅನೇಕ ಅಮೂಲ್ಯ ಆಟಗಾರ್ತಿಯರಿದ್ದಾರೆ.

ಒಂದು ವೇಳೆ ಮಹಿಳೆಯರ ಐಪಿಎಲ್​ ನಡೆಸಿದ್ದೇ ಆದ್ರೆ, ತಂಡಕ್ಕೆ ಮತ್ತಷ್ಟು ಸಹಾಯವಾಗಲಿದೆ. ಹೊಸ ಪ್ರತಿಭೆಗಳು ಬೆಳಕಿಗೆ ಬರುವ ಮೂಲಕ ಭವಿಷ್ಯದಲ್ಲಿ ದೊಡ್ಡ ಟೂರ್ನಿಗಳನ್ನ ಗೆಲ್ಲೋದಕ್ಕೆ ಸಹಕಾರಿಯಾಗಲಿದೆ ಅಂತಾ ಗವಾಸ್ಕರ್ ಹೇಳಿದ್ದಾರೆ.