ಸಂಡೇ ಲಾಕ್‌ಡೌನ್ ಗೆ ಮೈಸೂರು ಸ್ತಬ್ಧ !

Promotion

ಮೈಸೂರು, ಜುಲೈ 12, 2020 (www.justkannada.in): ಸಂಡೇ ಲಾಕ್‌ಡೌನ್ ಗೆ ಮೈಸೂರು ಸ್ತಬ್ದವಾಗಿದೆ.

ಮೈಸೂರಿನಲ್ಲಿ ಮನೆಯಿಂದ ಹೊರಬಾರದ ಜನರು. ನಗರದ ಪ್ರಮುಖ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿವೆ. ವಾಣಿಜ್ಯ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ.

ಸಂಡೇ ಲಾಕ್ಡೌನ್‌ಗೆ ವ್ಯಾಪಕ ಬೆಂಬಲ ನೀಡಿದ ಮೈಸೂರಿಗರು. ಕರ್ಫೂಗೆ ವ್ಯಾಪಾರಸ್ಥರಿಂದ ಹೆಚ್ಚಿನ ಬೆಂಬಲ ಸಿಕ್ಕಿದೆ. ಅಲ್ಲಲ್ಲಿ ಕೆಲ ವಾಹನಗಳ ಓಡಾಟ ಬಿಟ್ಟರೆ ಮೈಸೂರು ಸ್ತಬ್ಧವಾಗಿದೆ.

ಅಗತ್ಯ ಸೇವೆ ಹಾಗೂ ವೈದ್ಯಕೀಯ ಸೇವೆ ಹೊರತು ಪಡಿಸಿ ಉಳಿದೆಲ್ಲವೂ ಬಂದ್ ಆಗಿದೆ. ಹಾಲು, ತರಕಾರಿ, ದಿನಸಿ, ಪೆಟ್ರೋಲ್, ಮೆಡಿಕಲ್ ಫಾರ್ಮಸಿಗೆ ಮಾತ್ರ ಅವಕಾಶ ನೀಡಲಾಗಿದೆ.