ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಹೂಳು ಕೃಷಿ ಭೂಮಿಗೆ ಸೂಕ್ತ: ಸದುಪಯೋಗಪಡಿಸಿಕೊಳ್ಳುವಂತೆ ರೈತರಿಗೆ ಮನವಿ

kannada t-shirts

ಬೆಂಗಳೂರು,ಮಾರ್ಚ್,20,2021(www.justkannada.in) : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವರ್ತೂರು ಕೆರೆಯಲ್ಲಿನ ಹೂಳನ್ನು ಸಾರ್ವಜನಿಕರು ಅಗತ್ಯಕ್ಕನುಸಾರ ತೆಗೆದುಕೊಂಡು ಹೋಗಬಹುದಾಗಿದ್ದು, ಕೆರೆಯ ಸುತ್ತಮುತ್ತಲಿನ ರೈತರು ಇದರ ಸದುಪಯೋಗ ಪಡೆಯುವ ಉದ್ದೇಶದಿಂದ ಬಿಡಿಎ ಸೈಟ್ ಆಫೀಸ್ ಗಳಲ್ಲಿ ಮನವಿ ಸಲ್ಲಿಸಲು ಈ ಮೂಲಕ ಕೋರಲಾಗಿದೆ.jkರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠದ ಆದೇಶದಂತೆ, ಬೆಂಗಳೂರು ಪೂರ್ವ ತಾಲೂಕು, ವರ್ತೂರು ಹೋಬಳಿ, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ ಹೂಳನ್ನು ತೆಗೆಯಲಾಗಿದ್ದು, ವರ್ತೂರು ಕೆರೆಯಲ್ಲಿನ ಹೂಳಿನ ಗುಣಮಟ್ಟದ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಕೆರೆಗಳ ಹೂಳನ್ನು ಕೃಷಿ ಜಮೀನುಗಳಿಗೆ ಉಪಯೋಗಿಸಲು ಸೂಕ್ತವಾಗಿದೆ ಎಂದು ವರದಿ ನೀಡಿದ್ದಾರೆ.

Suitable-Bellandur-Virtur lakes-make use-Appeal-farmers

ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ಸಹಾಯಕ ಅಭಿಯಂತರರು (9448600709), ಸಹಾಯಕ ಕಾರ್ಯಪಾಲಕ ಅಭಿಯಂತರರು (9743938431) ಮತ್ತು ಕಾರ್ಯಪಾಲಕ ಅಭಿಯಂತರರು (7349524895) ಸಂಪರ್ಕಿಸಬಹುದಾಗಿದೆ.

ENGLISH SUMMARY….

Bellandur and Vartur lakes silt suitable for agricultural land: Farmers appealed to utilize it
Bengaluru, Mar. 20, 2021 (www.justkannada.in): Citizens have been allowed to take the silt accumulated in the Vartur tank that comes under the Bangalore Development Authority limits. Farmers in the surrounding areas have been requested to submit appeals at the BDA site office to utilize the silt.Suitable-Bellandur-Virtur lakes-make use-Appeal-farmers
Silt from the Bellandur and Vartur tanks in Bengaluru East Taluk have been removed as per the directions of the National Green Tribunal Bench. The Karnataka Pollution Control Board has certified that the silt removed from these tanks is suitable to be used for agricultural land fertility.
For more details, you contact the BDA Assistant Engineer (9448600709), Assistant Executive Engineer (9743938431), and Executive Engineer (7349584895).
Keywords: Bellandur and Vartur tanks/ silt removed/ suitable for agricultural land/ Pollution Control Board certified

key words : Suitable-Bellandur-Virtur lakes-make use-Appeal-farmers

website developers in mysore