ರವಿಚಂದ್ರನ್ ಸಿನಿಮಾಗೆ ಅಭಿಮಾನಿಗಳೇ ಹೆಸರು ನೀಡೋ ಚಾನ್ಸ್ ಕೊಟ್ಟ ನಿರ್ಮಾಪಕರು

ಬೆಂಗಳೂರು, ಅಕ್ಟೋಬರ್ 16, 2020 (www.justkannada.in): ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಎನ್.ಎಸ್ ರಾಜಕುಮಾರ್ ನಿರ್ಮಾಣದ ಹೊಸ ಸಿನಿಮಾಗೆ ಟೈಟಲ್ ನ್ನು ಪ್ರೇಕ್ಷಕರೇ ನೀಡಬಹುದು, ಇಂತಹದೊಂದು ಅವಕಾಶವನ್ನು ನಿರ್ಮಾಪಕರು ಅಭಿಮಾನಿಗಳಿಗೆ ನೀಡಿದ್ದಾರೆ.

ಹೌದು. ಓಂಕಾರ್ ಮೂವೀಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ನಾಮಕರಣ ಮಾಡಲು ಅಭಿಮಾನಿಗಳಿಗೆ ಅವಕಾಶ ನೀಡಲಾಗುತ್ತಿದೆ.

ನಿಮಗೆ ಇಷ್ಟವಾದ ಟೈಟಲ್ ನ್ನು 8867105511 ಗೆ ಕಳುಹಿಸಬಹುದು. ಅಭಿಮಾನಿಗಳು ಕಳುಹಿಸುವ ಸೂಕ್ತ ಟೈಟಲ್ ನ್ನೇ ಚಿತ್ರಕ್ಕೆ ಇಡಲಾಗುವುದು ಎಂದು ನಿರ್ಮಾಪಕರು ಹೇಳಿದ್ದಾರೆ.