ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ಜೀವವಿಮೆ ಹಾಗೂ ಕರೋನಾ ಲಸಿಕೆ ನೀಡುವಂತೆ ಸುಧಾಕರ್ ಎಸ್ ಶೆಟ್ಟಿ ಮನವಿ…

ಬೆಂಗಳೂರು,ಮೇ,20,2021(www.justkannada.in): ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ಜೀವವಿಮೆ ಹಾಗೂ ಕರೋನಾ ಲಸಿಕೆ ನೀಡುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ  ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.jk

ಈ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸುಧಾಕರ್ ಎಸ್ ಶೆಟ್ಟಿ, ಇಂದು ಪ್ರಪಂಚದಾದ್ಯಂತ ಕರೋನದ ಎರಡನೆಯ ಅಲೆ ಬಹಳ ಪ್ರಭಾವವನ್ನು ಬೀರಿರುತ್ತದೆ . ಈ ಅಲೆ ನಮ್ಮ ದೇಶ,ಹಾಗು ಕರ್ನಾಟಕ  ರಾಜ್ಯವನ್ನು ಸಂಪೂರ್ಣ ಆವರಿಸಿ 23,45,400 ಜನರಿಗೆ  ತಗುಲಿ, ಇದುವರೆಗೂ  22,306 ಜನರನ್ನು ಬಲಿ ತೆಗೆದು ಕೊಂಡಿರುವುದು ದುರದೃಷ್ಟಕರ  .

ಕೊರೋನ ಅಲೆಯನ್ನು ತಡೆಯಲು ರಾಜ್ಯದ ಜನತೆಯನ್ನು ಕಾಪಾಡಲು ತಾವು ತಮ್ಮ ವಯಸ್ಸನ್ನು ಲೆಕ್ಕಿಸದೆ, ತಮಗೆ ಕರೋನ ತಗಲಿದರು ಲೆಕ್ಕಿಸದೆ ಸಮಾರೋಪಾದಿಯಲ್ಲಿ  ತಾವು ಮತ್ತು ಸಂಪುಟದ ಸಚಿವರು ಶ್ರಮಿಸುತ್ತಿದ್ದೀರಿ, ತಮಗೆ ತಾಯಿ ಶ್ರೀ ಚಾಮುಂಡೇಶ್ವರಿ ಅರೋಗ್ಯ, ಆಯಸ್ಸು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಈ ಕರೋನದ ಅಲೆಯನ್ನು ತಡೆಯಲು ಕರ್ನಾಟಕದಲ್ಲಿರುವ 6009 ಗ್ರಾಮ ಪಂಚಾಯಿತಿಯ ಒಟ್ಟು 94127 ಸದಸ್ಯರಿದ್ದು, ಇವರನ್ನು ಗ್ರಾಮ ಮಟ್ಟದಲ್ಲಿ ಕರೋನ ವಾರಿಯರ್ಸ್ ಆಗಿ ನೇಮಕ ಮಾಡಲಾಗಿರುತ್ತದೆ. ಇದು ತುಂಬಾ ಸಂತೋಷದಾಯಕವಾದ ವಿಷಯವಾಗಿದೆ.

ಯಾವುದೇ ಸಮಸ್ಯೆ ಎದುರಾದರೂ, ಮೊದಲಿಗೆ ಕರೆಯುವುದು ಚುನಾಯಿತ ಸದಸ್ಯರನ್ನು. ಸಮಸ್ಯೆ ಉಂಟಾದಲ್ಲಿ ಸ್ಪಂದಿಸುವುದು ಚುನಾಯಿತ ಸದಸ್ಯರು. ತಮ್ಮ ಆರೋಗ್ಯ, ತಮ್ಮ ಕುಟುಂಬದ ಅರೋಗ್ಯ ವನ್ನು ಲೆಕ್ಕಿಸದೆ ಕರೋನ ಸೋಂಕು ತಗುಲಿದವರ ಮನೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿ ಅವರಿಗೆ ಔಷದಿ,ದವಸ ದಾನ್ಯ, ಊಟದ ವ್ಯವಸ್ಥೆ ಮಾಡುತ್ತಾರೆ.

ಆಕಸ್ಮಿಕವಾಗಿ ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಆ ಮನೆಯ ಶವ ಸಂಸ್ಕಾರಕ್ಕೆ ಬೇಕಾದ ವ್ಯವಸ್ಥೆ ಮೊದಲು ಮಾಡುವವರು ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರು.

ಈ ನಿಟ್ಟಿನಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಗ್ರಾಮೀಣ ಭಾಗದಲ್ಲಿ ಕಂಡು ಬಂದ ಸೋಂಕಿತರನ್ನು ತಾಲ್ಲೂಕು ಆಸ್ಪತ್ರೆಗಳಿಗೆ ಅಥವಾ ಜಿಲ್ಲಾಸ್ಪತ್ರೆಗಳಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಇಷ್ಟೆಲ್ಲಾ ಕೆಲಸ ಮಾಡುವ ಈ ಸದಸ್ಯರಿಗೆ ಕೋವಿಡ್  ಲಸಿಕೆಯನ್ನು ಸಹ ಸರ್ಕಾರ ಹಾಕಿಲ್ಲ. ಹಾಗೂ ಇವರಿಗೆ ಯಾವುದೇ ರೀತಿಯ ಜೀವ ವಿಮೆಯನ್ನು ಸಹ ಮಾಡಿಲ್ಲದಿರುವುದು ತುಂಬಾ ಶೋಚನೀಯ ವಿಷಯವಾಗಿದೆ.sudhakar-s-shetty-appeals-all-gram-panchayat-members-corona-vaccine

ಆದ್ದರಿಂದ ತಾವು ಈ ಕೂಡಲೇ ರಾಜ್ಯದಲ್ಲಿರುವ 94,127 ಗ್ರಾಮ ಪಂಚಾಯಿತಿ ಸದಸ್ಯರನ್ನು ಕರೋನ ವಾರಿಯಾರ್ಸ್ ಎಂದು ಘೋಷಣೆ ಮಾಡಿ ಸದಸ್ಯರಿಗೆ ಜೀವ ವಿಮೆ ಮಾಡಿಸಿ ಕೊಡಬೇಕಾಗಿ, ಜೊತೆಗೆ ಆದಷ್ಟು ಬೇಗ ಅವರಿಗೆ ಕರೋನ ಲಸಿಕೆಯನ್ನು ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.  ಏಕೆಂದರೆ ಕರ್ನಾಟಕದಲ್ಲಿರುವ ಗ್ರಾಮ ಪಂಚಾಯತಿಯ ಸದಸ್ಯರಲ್ಲಿ ಬಹುಸಂಖ್ಯಾತರು 45 ವರ್ಷದೊಳಗಿನವರಾಗಿರುತ್ತಾರೆ ಆ ಕಾರಣದಿಂದ ಅವರಿಗೆ ಕರೋನ ಲಸಿಕೆ ನೀಡಿರುವುದಿಲ್ಲ ಆದ್ದರಿಂದ ದಯಮಾಡಿ ಈ ಕೂಡಲೇ ಅವರಿಗೆಲ್ಲ ಕರೋನ ಲಸಿಕೆ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಸುಧಾಕರ್ ಎಸ್ ಶೆಟ್ಟಿ ಮನವಿ ಮಾಡಿದ್ದಾರೆ.

Key words: Sudhakar S Shetty-appeals – all Gram Panchayat -members -corona vaccine.