ಕೊಠಡಿಯಲ್ಲಿ ಕೂಡಿಹಾಕಿ ಶಾಸಕ ಸುಧಾಕರ್ ಮನವೊಲಿಕೆಗೆ ಯತ್ನ: ವಿಧಾನಸೌಧದಲ್ಲಿ ಬಿಜೆಪಿ- ಕಾಂಗ್ರೆಸ್ ನಾಯಕರ ಜಟಾಪಟಿ…

ಬೆಂಗಳೂರು,ಜು,10,2019(www.justkannada.in):  ಇಂದು ಹೊಸಕೋಟೆ ಕ್ಷೇತ್ರದ ಶಾಸಕ ಎಂಟಿಬಿ ನಾಗರಾಜ್, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಸುಧಾಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಡಾ.ಸುಧಾಕರ್ ಮನವೊಲಿಕೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಜಟಾಪಟಿ ನಡೆದಿದೆ.

ಡಾ. ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ ತಮ್ಮ ರಾಜೀನಾಮೆ ನೀಡಿ ವಾಪಸ್ ಬರುವ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಮತ್ತಿತರ ಕಾಂಗ್ರೆಸ್ ನಾಯಕರು  ಶಾಸಕ ಸುಧಾಕರ್  ಅವರನ್ನ ತಡೆದಿದ್ದಾರೆ. ನಂತರ ಸುಧಾಕರ್ ಅವರನ್ನ ವಿಧಾನಸೌಧದ 3ನೇ ಮಹಡಿಯ ಸಚಿವ ಕೆ.ಜೆ ಜಾರ್ಜ್ ಕೊಠಡಿಗೆ ಕರೆದೊಯ್ದು  ಮನವೊಲಿಕೆಗೆ ಮುಂದಾಗಿದ್ದಾರೆ.

ಅಲ್ಲದೆ ಕಾಂಗ್ರೆಸ್ ನಾಯಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಜಾರ್ಜ್ ಕೊಠಡಿ ಬಳಿ ಬಿಜೆಪಿ ಮುಖಂಡರು ಜಮಾಯಿಸಿ ಕಾಂಗ್ರೆಸ್ ಮುಖಂಡರ ಜತೆ ಜಟಾಪಟಿ ನಡೆಸಿದ್ದಾರೆ ಎನ್ನಲಾಗಿದೆ. ವಿಧಾನಸೌಧದಲ್ಲಿ ಹೈಡ್ರಾಮ ನಡೆದ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಆಗಮಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಖಾಗಿ ಪಡೆ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟಿದೆ.

Key words: Sudhakar – persuade – BJP-congress- leaders- clash