ಕೋಟಿಗೊಬ್ಬ 3 ನೋಡಲು ಕೊರೊನಾ ಪರಿಸ್ಥಿತಿ ತಿಳಿಯಾಗುವವರೆಗೆ ಕಾಯ್ಬೇಕು ಎಂದ ಕಿಚ್ಚ

ಬೆಂಗಳೂರು, ಜುಲೈ 31, 2020 (www.justkannada.in): ಕಿಚ್ಚ ಸುದೀಪ್ ತಮ್ಮ ಕೋಟಿಗೊಬ್ಬ 3 ಸಿನಿಮಾ ಬಗ್ಗೆ ಅಪ್ ಡೇಟ್ ಕೊಟ್ಟಿದ್ದಾರೆ.

ಅತ್ತ ಡಿ ಬಾಸ್ ದರ್ಶನ್ ರಾಬರ್ಟ್ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದರೆ, ಯಶ್ ಕೆಜಿಎಫ್ 2 ಚಿತ್ರತಂಡ ಸಂಜಯ್ ದತ್ ಲುಕ್ ಅನಾವರಣಗೊಳಿಸಲಾಗಿತ್ತು.

ಕಿಚ್ಚ ಕೋಟಿಗೊಬ್ಬ 3 ಹೆಚ್ಚು ಕಡಿಮೆ ಕೆಲಸ ಮುಗಿದಿದೆ. ಆದರೆ ಸಣ್ಣ ಭಾಗದ ಕೆಲಸ ಬಾಕಿಯಿದೆ. ಅದನ್ನು ಕೊರೋನಾದಿಂದಾಗಿ ಮಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ ಸುದೀಪ್.

ಕೊರೊನಾ ಪರಿಸ್ಥಿತಿ ತಿಳಿಯಾದ ಕೂಡಲೇ ಕೆಲಸ ಮುಗಿಸಿ ನಿಮ್ಮ ಮುಂದೆ ಬರಲಿದ್ದೇವೆ ಎಂದು ಕಿಚ್ಚ ಹೇಳಿದ್ದಾರೆ.