ಶಿವರಾತ್ರಿಗೆ ಕಿಚ್ಚನ ‘ಕೋಟಿಗೊಬ್ಬ 3’ ಟೀಸರ್ ಬಿಡುಗಡೆ

Promotion

ಬೆಂಗಳೂರು, ಫೆಬ್ರವರಿ 17, 2020 (www.justkannada.in): ಇದೇ ಶುಕ್ರವಾರ ಮಹಾಶಿವರಾತ್ರಿ ದಿನ ಕೋಟಿಗೊಬ್ಬ 3 ಟೀಸರ್ ಬಿಡುಗಡೆಯಾಗಲಿದೆ.

ಈಗಾಗಲೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಚಿತ್ರದ ಬಗ್ಗೆ ಕುತೂಹಲ ಹುಟ್ಟುವಂತೆ ಮಾಡಿತ್ತು. ಈ ಮೂಲಕ ಕಿಚ್ಚನ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಶಿವರಾತ್ರಿ ದಿನ ಚಿತ್ರತಂಡ ಸರ್ಪ್ರೈಸ್ ಸಿಗಲಿದೆ.

ಇನ್ನು ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾ ಚಿತ್ರೀಕರಣ ಮುಗಿದು ದಿನಗಳೇ ಮುಗಿದಿದೆ. ಆದರೆ ಚಿತ್ರತಂಡದಿಂದ ಹೊಸ ಸುದ್ದಿ ಬರಲು ಸಾಕಷ್ಟು ದಿನಗಳನ್ನು ತೆಗೆದುಕೊಂಡಿತ್ತು.

ಅಂದು ಮಧ್ಯಾಹ್ನ 12.01 ಕ್ಕೆ ಚಿತ್ರದ ಟೀಸರ್ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.