ತಡವಾಗಲಿದೆ ಕಿಚ್ಚ-ಸೂರಿ ಕಾಂಬಿನೇಷನ್ ಸಿನಿಮಾ !

ಬೆಂಗಳೂರು, ಜೂನ್ 21, 2019 (www.justkannada.in): ನಿರ್ದೇಶಕ ಸೂರಿ ಮತ್ತು ಕಿಚ್ಚ ಸುದೀಪ ಕಾಂಬಿನೇಷನ್ ಸಿನಿಮಾ ತಡವಾಗಲಿದೆ.

ಸದ್ಯ ಸುದೀಪ್ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರು ಸುಕ್ಕ ಸೂರಿ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಆದರೆ ಆ ಸುದ್ದಿ ಮತ್ತಷ್ಟು ದಿನ ತಡವಾಗಲಿದೆ.

ಜತೆಗೆ ಸೂರಿ ಸದ್ಯ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಈ ಸಿನಿಮಾ ಸದ್ಯಕ್ಕೆ ಅನೌನ್ಸ್ ಮಾಡುವುದು ತಡವಾಗಲಿದೆ. ಚಿತ್ರಕ್ಕೆ ಸಕಲ ತಯಾರಿ, ನಾನು ಹಾಗೂ ಸುದೀಪ್ ಅವರ ಸಮಯ ಹೊಂದಾಣಿಕೆ ಆಗಿದ ತಕ್ಷಣ ದಿನಾಂಕ ಅನೌನ್ಸ್ ಆಡುವುದಾಗಿ ತಿಳಿಸಿದ್ದಾರೆ.