ಕ್ಲಾಸ್‌ಗೆ ಬರಲು ವಿದ್ಯಾರ್ಥಿಗಳ ನಿರಾಸಕ್ತಿ! ಕೋವಿಡ್ ಟೆಸ್ಟ್’ಗೆ ಹಿಂದೇಟು

ಬೆಂಗಳೂರು, ನವೆಂಬರ್ 16, 2020 (www.justkannada.in): ನಾಳೆಯಿಂದ ಕಾಲೇಜು ಪುನಾರಂಭವಾಗಲಿದ್ದು, ಕ್ಲಾಸ್‌ಗೆ ಬರಲು ವಿದ್ಯಾರ್ಥಿಗಳ ನಿರಾಸಕ್ತಿ ಕಂಡುಬರುತ್ತಿದೆ.

ಸುದೀರ್ಘ ರಜೆ ಮೂಡ್‌ನಿಂದ ಹೊರಬಾರದ ವಿದ್ಯಾರ್ಥಿಗಳು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೂ ನಿರಾಸಕ್ತಿ ವಹಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 1.30 ಲಕ್ಷ ವಿದ್ಯಾರ್ಥಿಗಳು. ಈ ಪೈಕಿ ಅಂತಿಮ ವರ್ಷದ ಪಿಜಿ, ಯುಜಿ ವಿದ್ಯಾರ್ಥಿಗಳು ಸುಮಾರು 35 ಸಾವಿರಕ್ಕೂ ಹೆಚ್ಚಿದ್ದಾರೆ.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ವ್ಯಾಪ್ತಿ ಹೊಂದಿರುವ ವಿವಿ ಕಾಲೇಜು ಪುನಾರಂಭ ಸಂಬಂಧ ಎಸ್‌ಒಪಿ ಸಿದ್ಧಪಡಿಸಿರುವ ವಿಶ್ವವಿದ್ಯಾಲಯ ಅದರನ್ವಯ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪ್ರಾಂಶುಪಾಲರಿಗೆ ಸೂಚನೆ.