ವಿದ್ಯಾರ್ಥಿಗಳು ಶಾಂತಿ ಕದಡುವ ಕೆಲಸ ಮಾಡಬಾರದು-  ಸಿಎಂ ಬೊಮ್ಮಾಯಿ ಮನವಿ.

kannada t-shirts

ನವದೆಹಲಿ,ಫೆಬ್ರವರಿ,7,2022(www.justkannada.in):  ರಾಜ್ಯ ಶಾಲಾ-ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದರೂ ಸಹ ಇದಕ್ಕೆ ಸೆಡ್ಡು ಹೊಡೆದು ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಿರುವ ಹಿನ್ನೆಲೆ ಶಾಂತಿ ಕದಡದಂತೆ ವಿದ್ಯಾರ್ಥಿಗಳಲ್ಲಿ  ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ವಿದ್ಯಾರ್ಥಿಗಳು ಶಾಂತಿ ಕದಡುವ ಕೆಲಸ ಮಾಡಬಾರದು.  ನಾಳೆ ನ್ಯಾಯಾಲಯದಿಂದ ತೀರ್ಪು ಬರುತ್ತದೆ. ತೀರ್ಪು ಬಂದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವ.  ಹಿಜಾಬ್ ವಿವಾದದ ಹಿಂದೆ ಕೆಲ ಶಕ್ತಿಗಳು ಕೆಲಸ ಮಾಡುತ್ತಿವೆ. ಕೇರಳ ಮಹಾರಾಷ್ಟ್ರದಲ್ಲೂ ಈ ಹಿಂದೆ ವಿವಾದ ನಡೆದಿತ್ತು.  ಸದ್ಯ ಪ್ರಕರಣ ಕೋರ್ಟ್ ನಲ್ಲಿರುವುದರಿಂದ ಮಾತನಾಡಲ್ಲ ಎಂದರು.

ರಾಜ್ಯಕ್ಕೆ  ನ್ಯಾಯಸಮ್ಮತವಾದ ನೀರಿನ ಪಾಲನ್ನ ಪಡೆದಯಕೊಳ್ಳುತ್ತೇವೆ  ನೀರಿನ ವಿಚಾರದಲ್ಲಿ ಯಾವುದೇ ರಾಜಿಯಾಗುವುದಿಲ್ಲ. ನದಿ ಜೋಡಣೆ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ.  ಸ್ಪಷ್ಟ ನಿಲುವಿನಲ್ಲಿ ಮುಂದುವರೆಯುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Students – peace-appeal -CM Bommai.

website developers in mysore