ಅಮಿತ್ ಶಾ ನೇತೃತ್ವದ ಸಭೆಯಲ್ಲಿ ರಾಜ್ಯದ ವಿಷಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸಿದ್ದೇನೆ-  ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ನವೆಂಬರ್,15,2021(www.justkannada.in):  ತಿರುಪತಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಯಶಸ್ವಿ ಸಭೆ ನಡೆದಿದ್ದು, ಸಭೆಯಲ್ಲಿ ರಾಜ್ಯದ ವಿಷಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಭೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಗೋದಾವರಿ, ಕೃಷ್ಣ ನದಿಗಳ ಜೋಡಣೆ ಬಗ್ಗೆ ಚರ್ಚೆಯಾಗಿದೆ. ರಾಜ್ಯದ ನೀರಿನ ಪಾಲಿನ ಬಗ್ಗೆ ಪ್ರಶ್ನೆ ಮಾಡಲಾಗಿದೆ. ರಾಜ್ಯದ ಅಹವಾಲು ಪರಿಗಣಿಸಿ ಜಲಶಕ್ತಿ ಮಂತ್ರಾಲಯದ ಅಧಿಕಾರಿಗಳಿಗೆ ಕೆಲ ಸೂಚನೆ ನೀಡಲಾಗಿದೆ. ಕರ್ನಾಟಕದ ಅಹವಾಲು ಪರಿಗಣಿಸುವಂತೆ ಸೂಚಿಸಲಾಗಿದೆ ಎಂದು  ಹೇಳಿದರು.

ರಾಜ್ಯದ ವಿಷಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸಿದ್ದೇನೆ. ನಮ್ಮ ಪ್ರತಿಪಾದನೆಗೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಮೇಕೆದಾಟು ವಿಚಾರವನ್ನು ನಾನು ಪ್ರಸ್ತಾಪ ಮಾಡಿದ್ದೇನೆ. ತಮಿಳುನಾಡು ಮುಖ್ಯಮಂತ್ರಿ ಸಭೆಗೆ ಬಂದಿರಲಿಲ್ಲ. ಹೀಗಾಗಿ ಸಭೆಯಲ್ಲಿ ಆ ಬಗ್ಗೆ ಪ್ರಸ್ತಾಪವಾಗಿಲ್ಲ. ಮೇಕೆದಾಟು ವಿಚಾರ ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಆದಷ್ಟು ಬೇಗ ಯೋಜನೆ ಮಾಡುವುದಕ್ಕೆ ಕ್ರಮಕೈಗೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ತಮಿಳುನಾಡಿನಲ್ಲಿ ನೀರಿನ ರಾಜಕಾರಣ ಯಾವಾಗಲೂ ನಡೆಯುತ್ತದೆ. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಅಲ್ಲಿ ತಗಾದೆ ಇರುತ್ತದೆ. ಅವರ ಯೋಜನೆಗಳ ಬಗ್ಗೆ ನಮ್ಮ ಆಕ್ಷೇಪವೂ ಇದೆ. ನಮ್ಮ ಯೋಜನೆಗಳಿಗೆ ಅವರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ನ್ಯಾಯಸಮ್ಮತ ಪರಿಹಾರ ಆಗಬೇಕಾಗಿದೆ ಎಂದು  ಸಿಎಂ ಬೊಮ್ಮಾಯಿ ತಿಳಿಸಿದರು.

ಬಿಟ್ ಕಾಯಿನ್ ಪ್ರಕರಣ ಜೀವಂತವಾಗಿಡಲು ಕಾಂಗ್ರೆಸ್ ಯತ್ನ…

ಪ್ರಕರಣವನ್ನು ಜೀವಂತವಾಗಿ ಇಡಲು ಕಾಂಗ್ರೆಸ್ ಯತ್ನಿಸುತ್ತಿದೆ. ಬಿಟ್ ಕಾಯಿನ್ ಹಗರಣದಲ್ಲಿ ದಾಖಲೆ ಇದ್ದರೆ ಕೊಡಲಿ. ED ಅಥವಾ ನಮ್ಮ ಪೊಲೀಸರಿಗೆ ದಾಖಲೆ ಕೊಡಲಿ. ಇದೇ ಮಾತನ್ನು ನಾವು ಹಲವು ಬಾರಿ ಹೇಳಿದ್ದೇನೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಏನೂ ವಿಶೇಷ ಇಲ್ಲ. ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: strongly – state –issue-meeting – CM Basavaraja Bommai

ENGLISH SUMMARY….

I have presented the State issues strongly in the meeting held by Amit Shah: CM Bommai
Bengaluru, November 15, 2021 (www.justkannada.in): “The meeting held under the leadership of BJP leader Amit Shah at Tirupati has been successful, and I have strongly proposed the issues going on in the State,” informed Chief Minister Basavaraj Bommai.
Speaking at Bengaluru today, Chief Minister Basavaraj Bommai informed discussion on the joining of Godavari and Krishna rivers was held. “Apart from that, the issue over water sharing was also discussed. A few instructions have been given to the Ministry of Water Resources regarding our grievance,” he added.
“I also raised the Mekedatu project. However, the Tamil Nadu Chief Minister didn’t attend the meeting, and hence it was not discussed. Our government has considered the Mekedatu issue very seriously. We will take all necessary measures to start the project as soon as possible,” he said.
Replying to the question on the ongoing Bitcoin issue, the Chief Minister expressed his view that the Congress leaders are just trying to keep the issue alive. “Let them provide the documents if they are in possession to the Enforcement Directorate or the Police. I have told this to them several times. There is nothing special in this case,” he informed.
Keywords: Chief Minister Basavaraj Bommai/ Delhi visit/ Amit Shah/ meeting