ಜಿಲ್ಲೆಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ – ಸಚಿವ ಡಾ. ನಾರಾಯಣ್ ಗೌಡ ಭರವಸೆ..

ಮಂಡ್ಯ, ಸೆಪ್ಟಂಬರ್,5,2020(www.justkannada.in):  ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವ, ಗುರು ಸಾಕ್ಷ ಪರಬ್ರಹ್ಮ, ಗುರುವೇ ನಮಃ  ಎಂದು ಹೇಳಿರುವಂತೆ ಗುರು ಇಲ್ಲದ ಕ್ಷೇತ್ರವಿಲ್ಲ ಹಾಗೂ  ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯ ಸಾಧನೆಯು ತುಂಬ ಸಂತೋಷಕರವಾದ ವಿಷಯ ಎಂದು  ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣ್ ಗೌಡ ರವರು ಶ್ಲಾಘಿಸಿದರು.strive-develop-education-district-minister-narayan-gowda

ಇಂದು ಗಾಂಧಿ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಚಿವ ನಾರಾಯಣಗೌಡ, ಈ ಬಾರಿ ಶಿಕ್ಷಣ ಕ್ಷೇತ್ರದಲ್ಲಿನ ಉತ್ತಮವಾದ ಸಾಧನೆ ಮಾಡಲು ಶ್ರಮಿಸಿದ  ನಮ್ಮ ಜಿಲ್ಲೆಯ ಶಿಕ್ಷಕರಿಗೆ ಹಾಗೂ ಅಧಿಕಾಗಳಿಗೆ ಧನ್ಯವಾದಗಳು ತಿಳಿಸಿ ನಮ್ಮ ಜಿಲ್ಲೆಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಭಾರತದ ಇತಿಹಾಸದಲ್ಲಿ ನಮ್ಮ ಶಿಕ್ಷಕರಿಗೆ ಉತ್ತಮವಾದ ಸ್ಥಾನವನ್ನು ನೀಡಲಾಗಿದೆ ಹಾಗೂ ಪ್ರತಿಯೊಬ್ಬರ ಬದುಕಿನಲ್ಲಿ ಹೊಸ ರೂಪವನ್ನು ಕೊಡುವ ಶಿಲ್ಪಗಳು ಹಾಗೂ ಶಿಕಕ್ಷರಿಗೆ ಅತ್ಯಂತ ವಿಶೇಷವಾದ ಸ್ಥಾನ ಮತ್ತು ಪರಂಪರೆ ಇದೆ  ಹಾಗೂ   ಭಾರತ ದೇಶದ ಎರಡನೇ ರಾಷ್ಟ್ರಪತಿಯಾದ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆಯು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತಿರುವದು ತುಂಬ ಸಂತೋಷಕರವಾದ ವಿಷಯ   ಎಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ರವರು ಹೇಳಿದರು.

ಭಾರತದಲ್ಲಿ ಸುಮಾರು 130 ಕೋಟಿ ಜನ ಸಂಖ್ಯೆಯಲ್ಲಿ ಪ್ರತಿಯೊಬ್ಬರ ವ್ಯಕ್ತಿತ್ವವು ವಿಭಿನ್ನವಾಗಿದೆ ಹಾಗೂ ಉತ್ತಮವಾದ ಪರಂಪರೆ ಮತ್ತು ಸಂಸ್ಕೃತಿಗಳನ್ನು ಬಿಂಬಿಸುವತ್ತವೆ ಇದಕ್ಕೆಲ್ಲ ಶಿಕ್ಷಕರು ಕಾರಣ ಹಾಗೂ  ಎ.ಪಿ.ಜೆ.ಅಬ್ದುಲ್ ಕಲಾಂ ರವರು ಹೇಳವಂತೆ ಒಂದು ದೇಶ ಪ್ರಗತಿಯನ್ನು ಸಾಧಿಸಬೇಕಾದರೆ ಒಬ್ಬ ಶಿಕ್ಷಕನ ಪಾತ್ರ ಮುಖ್ಯವಾಗಿ ಮತ್ತು  ಪ್ರತಿ ತಂದೆ ತಾಯಂದಿರು ಶಿಕ್ಷಣವನ್ನು ಪಡೆದಾಗ ಮಾತ್ರವೇ ಸಾಧ್ಯ ಮತ್ತು ನಮ್ಮ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಹೀಗೆ ಇನ್ನು ಉನ್ನತಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದರು.

ರಾಷ್ಟ್ರಪತಿ ಯಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ನೆನಪಿಗಾಗಿ ಅವರ ಜನ್ಮ ದಿನಾಚರಣೆ  ಆಚರಣೆ ಮಾಡಲಾಯಿತು.  10ನೇ ಸಾಲಿನಿಂದ ಇಂದು 4ನೇ ಸ್ಥಾನವನ್ನು ಅಲಂಕಾರಿಸಿದೆ ಎಂದು ಜಿಲ್ಲೆಯ ಸಾಧನೆ ಬಗ್ಗೆ  ನಮಗೆ ಹೆಮ್ಮೆ ಇದೇ ಹಾಗೂ ಎಲ್ಲಿಯವರೆಗೆ ಶಿಕ್ಷಕರಿಗೆ ಗೌರವ ಸಿಗುತ್ತದೆ ಅಲ್ಲಿಯ ವರೆಗೆ ದೇಶ ಸಾಧನೆ ಮಾಡುತ್ತದೆ ಎಂದು ಕ್ಷೇತ್ರದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ  ಗುರುನಂದನ್ ಅವರು ಹೇಳಿದರು.

ಮಂಡ್ಯ ವಿಧಾನಸಭಾ ಶಾಸಕರಾದ  ಎಂ. ಶ್ರೀನಿವಾಸ್,  ವಿಧಾನ ಪರಿಷತ್ ಸದಸ್ಯರಾದ ಶ್ರೀಕಂಠೆಗೌಡ, ಜಿಲ್ಲಾ ಪಂಚಾಯತ್ ನ ಅಧ್ಯಕ್ಷರಾದ ನಾಗರತ್ನ ಸ್ವಾಮಿ, ಜಿಲ್ಲಾ ಪಂಚಾಯತ್ ಸದಸ್ಯರು, ತಾಲ್ಲೂಕು ಪಂಚಾಯತ್ ಸದಸ್ಯರು ಮತ್ತು ಇತರ ಅಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Key words: Strive – develop – education – district-Minister -Narayan Gowda