“ಮತ್ತೆ ಮುಷ್ಕರ ಮಾಡಿ ಸಾರ್ವಜನಿಕ ಟೀಕೆಗೆ ಗುರಿಯಾಗುವುದು ಬೇಡ” : ಸಚಿವ ಲಕ್ಷ್ಮಣ ಸವದಿ ಮನವಿ

ಬೆಂಗಳೂರು,ಮಾರ್ಚ್,21,2021(www.justkannada.in) : ಸಾರಿಗೆ ಇಲಾಖೆಯೊಂದು ಕುಟುಂಬ, ಕುಟುಂಬದಲ್ಲಿ ಚರ್ಚಿಸೋಣ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳೋಣ. ಮತ್ತೆ ಮುಷ್ಕರ ಮಾಡಿ ಸಾರ್ವಜನಿಕ ಟೀಕೆಗೆ ಗುರಿಯಾಗುವುದು ಬೇಡ ಎಂದು ಸಚಿವ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.jkಸುದ್ದಿಗಾರರೊಂದಿಗೆ ಏಪ್ರಿಲ್ 7ರಿಂದ ಸಾರಿಗೆ ನೌಕರರಿಂದ ಮತ್ತೆ ಮುಷ್ಕರ ವಿಚಾರವಾಗಿ ಮಾತನಾಡಿದ ಅವರು, ನಿಮಗೆ ನನ್ನ ಮೇಲೆ ವೈಯಕ್ತಿಕ ದ್ವೇಷವೇ, ನಿಗಮದ ಮೇಲೆ ದ್ವೇಷವೇ? ಅಥವಾ ರಾಜ್ಯ ಸರ್ಕಾರದ ಮೇಲಿನ ದ್ವೇಷಕ್ಕೆ ಪ್ರತಿಭಟನೆ ನಡೆಸುತ್ತಿದ್ದೀರೋ? ಮತ್ತೆ ಮುಷ್ಕರ ನಡೆಸುವ ಬಗ್ಗೆ ನೋಟಿಸ್ ನೀಡಿದ್ದು ಯಕ್ಷ ಪ್ರಶ್ನೆಯಾಗಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.

ಸಾರಿಗೆ ನೌಕರರು ಮತ್ತೆ ಹೋರಾಟಕ್ಕೆ ಮುಂದಾಗಿದ್ದು, ಯಾಕೆಂದು ನನ್ನ ಪ್ರಶ್ನೆ? 9 ಬೇಡಿಕೆ ಈಡೇರಿಸಲು ಒಪ್ಪಿಕೊಂಡು ಅದರಲ್ಲಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಉಳಿದ ಒಂದು ಬೇಡಿಕೆ ಕೆಲವೇ ದಿನಗಳಲ್ಲಿ ಈಡೇರಿಸುತ್ತೇವೆ ಎಂದರು.Strike,back,No,need,public,criticism,Minister,Lakshmana Sawadi,appeals

ಸಾರಿಗೆ ಇಲಾಖೆ ಸಿಬ್ಬಂದಿ ನಿರ್ಗತಿಕರಾಗಲು ನಾವು ಬಿಡುವುದಿಲ್ಲ. ಯಾರೋ ನೀಡಿದ ತಪ್ಪು ಕಲ್ಪನೆಯಿಂದ ಮುಷ್ಕರ ಬೇಡ. ಮುಷ್ಕರದ ದುಷ್ಪರಿಣಾಮ ಸಾರಿಗೆ ಇಲಾಖೆ ಮೇಲಾಗುತ್ತದೆ ಎಂದು ಮನವಿ ಮಾಡಿದ್ದಾರೆ.

key words : Strike-back-No-need-public-criticism-Minister-Lakshmana Sawadi-appeals