ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ಮುಷ್ಕರ: ಮೈಸೂರು, ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟಗಳಿಂದ ಪ್ರತಿಭಟನಾ ರ್ಯಾಲಿ..

ಮೈಸೂರು/ಬೆಂಗಳೂರು,ಜ,8,2020(www.justkannada.in): ಕೇಂದ್ರದ ಕಾರ್ಮಿಕ ನೀತಿಯನ್ನ ವಿರೋಧಿಸಿದ ದೇಶಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ಮುಷ್ಕರ ಹೂಡಿದ್ದು ಈ ಮಧ್ಯೆ ರಾಜ್ಯದಲ್ಲಿ ಕಾರ್ಮಿಕರ ಮುಷ್ಕರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೈಸೂರು ಮತ್ತು ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನಾರ್ಯಾಲಿ ನಡೆಸುತ್ತಿವೆ. ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾಕಾರರು ಸೇರಿದ್ದು ಮೈಸೂರಿನಲ್ಲಿ ಜೆ.ಕೆ ಮೈದಾನದಿಂದ ಪುರಭವನದವರೆಗೆ ಪ್ರತಿಭಟನಾರ್ಯಾಲಿ ನಡೆಸಲಾಗುತ್ತಿದೆ. ಕಾರ್ಮಿಕರ ಪ್ರತಿಭಟನೆ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

ಇನ್ನು ಬೆಂಗಳೂರಿನಲ್ಲಿ ಟೌನ್ ಹಾಲ್ ಬಳಿ ಪ್ರತಿಭಟನೆಗೆ ನಿರ್ಬಂಧ ವಿಧಿಸಲಾಗಿದ್ದು ಈ ಹಿನ್ನೆಲೆ ಪ್ರತಿಭಟನೆಗೆ ಆಗಮಿಸಿದ ಕಾರ್ಮಿಕರು ಫ್ರೀಡಂ ಪಾರ್ಕ್ ನತ್ತ ತೆರಳುತ್ತಿದ್ದಾರೆ. ಪೀಣ್ಯಾದ 2ನೇ ಹಂತದಲ್ಲಿ ಸಿಐಟಿಯು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾರೆ. ಜಾಲಹಳ್ಳಿ ಕ್ರಾಸ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದು ಮೂರು ಸಾವಿರ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.

Key words:  Strike – opposition – central- labor policy-Protest – labor unions – Mysore-Bangalore