“ಕಳ್ಳತನಕ್ಕೆ ಯತ್ನಿಸುವಾಗಲೇ ನಾಲ್ವರು ಶ್ರೀಗಂಧ ಮರಗಳ್ಳರ ಬಂಧನ”

ಮೈಸೂರು,ಜನವರಿ,18,2021(www.justkannada.in) : ಕಳ್ಳತನಕ್ಕೆ ಯತ್ನಿಸುವಾಗಲೇ ನಾಲ್ವರು ಶ್ರೀಗಂಧ ಮರಗಳ್ಳರನ್ನು ಬಂಧಿಸಿ, 35 ಲಕ್ಷ ರೂ. ಮೌಲ್ಯದ ಶ್ರೀಗಂಧ ವಶಪಡಿಸಿಕೊಳ್ಳುವಲ್ಲಿ ಮೇಟಗಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.jkಮೇಟಗಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸುವ ಮೂಲಕ ನಗರದ ಬೆಲವತ್ತ ರಿಂಗ್ ರಸ್ತೆಯ ಪಕ್ಕದಲ್ಲಿರುವ ಭಾರತೀಯ ನೋಟು ಮುದ್ರಣ ಘಟಕದ ಕಾಂಪೌಂಡ್ ನಿಂದ (BRBNMPL) ಒಳಗೆ ನುಸಳಿ ಅಲ್ಲಿರುವ ಕಾಡಿನೊಳಗೆ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಡಿದು ಕಳ್ಳತನ ಮಾಡಲು ಬಂದಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.steal,While,trying,Four,Sandalwood,Woodcutter,Arrest 

ಇಲವಾಲ ಹೋಬಳಿಯ ಕಮ್ರಳ್ಳಿ ಗ್ರಾಮದವರಾದ ರಘು(46),ಮಂಜುನಾಥ(22), ಲಷ್ಕರ್ ಮೊಹಲ್ಲಾದ ಮಕ್ಬುಲ್ ಷರೀಫ್(58), ಕಲ್ಯಾಣಗಿರಿನಗರದ ಸೈಯದ್ ಗೌಸ್ (50) ಬಂಧಿತ ಆರೋಪಿಗಳಾಗಿದ್ದಾರೆ.steal,While,trying,Four,Sandalwood,Woodcutter,Arrest ಕಳ್ಳರಿಂದ 230 ಕೆ.ಜಿ. ತೂಕದ 35 ಲಕ್ಷ ಮೌಲ್ಯದ ಶ್ರೀಗಂಧ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಕೊಡಲಿ, ಗರಗಸ, ಬೈಕ್ ಅನ್ನು ಡಿಸಿಪಿ ಗೀತಪ್ರಸನ್ನ, ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಎ.ಮಲ್ಲೇಶ್, ಪಿ.ಎಸ್.ಐ ವಿಶ್ವನಾಥ್, ನಾಗರಾಜ್ ನಾಯಕ್ ಇತರೆ ಸಿಬ್ಬಂದಿ ಕಾರ್ಯಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

key words : steal-While-trying-Four-Sandalwood-Woodcutter-Arrest